ಜಮ್ಶೆಡ್ಪುರ್, ಬುಧವಾರ, 22 ಡಿಸೆಂಬರ್ 2010( 15:34 IST )
PTI
ಈರುಳ್ಳಿ ದರ ಏರಿಕೆ ದೇಶದ ಜನಸಾಮಾನ್ಯರ ಕಣ್ಣಲ್ಲಿ ನೀರು ತರಿಸುತ್ತಿದೆ.ಟೈರ್ ಅಂಗಡಿಯ ಮಾಲೀಕನೊಬ್ಬ ಟೈರ್ಗಳನ್ನು ಖರೀದಿಸಿದಲ್ಲಿ ಉಚಿತವಾಗಿ ಈರುಳ್ಳಿಯನ್ನು ನೀಡುವುದಾಗಿ ಅಮಿಷವೊಡ್ಡಿದ್ದಾನೆ.
ಟ್ರಕ್ಗೆ ಅಗತ್ಯವಾದ ಟೈರ್ ಖರೀದಿಸಿದಲ್ಲಿ ಐದು ಕೆಜಿ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುವುದು. ಕಾರಿನ ಟೈರ್ ಖರೀದಿಸಿದಲ್ಲಿ ಒಂದು ಕೆಜಿ ಈರುಳ್ಳಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಕಾಲಿಮತಿ ರಸ್ತೆಯಲ್ಲಿರುವ ಟೈರ್ ಅಂಗಡಿಯ ಮಾಲೀಕ ಸತ್ನಾಮ್ ಸಿಂಗ್ ಗಂಭೀರ್ ಹೇಳಿದ್ದಾರೆ.
ಗಂಭೀರ್, ಬಿಹಾರ್ ಮತ್ತು ಜಾರ್ಖಂಡ್ ಅಖಿಲ ಭಾರತ ಸಿಖ್ ವಿದ್ಯಾರ್ಥಿ ಫೆಡರೇಶನ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದಕ್ಕಿಂತ ಮೊದಲು, ಜಾರ್ಖಂಡ್ ವಿಧಾನ ಸಭೆಯಲ್ಲಿ ಮತದಾನ ಮಾಡಲು ಮತದಾರರನ್ನು ಉತ್ತೇಜಿಸಲು ಟೈರ್ ಖರೀದಿಸಿದಲ್ಲಿ ರಿಯಾಯಿತಿಗಳನ್ನು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.