ರಾಜ್ಯದಲ್ಲಿ ಪ್ರತಿ ಕೆಜಿ ಈರುಳ್ಳಿ ದರ 85 ರೂಪಾಯಿಗಳಿಗೆ ಏರಿಕೆ ಕಂಡ ಹಿನ್ನೆಲೆಯಲ್ಲಿ, ಉತ್ತರ ಭಾರತದಿಂದ ಈರುಳ್ಳಿಯನ್ನು ಖರೀದಿಸಲು ತಮಿಳುನಾಡು ನಿರ್ಧರಿಸಿದೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಖಾತೆ ರಾಜ್ಯ ಸಚಿವ ಎ.ವಿ.ವೇಲು ಮಾತನಾಡಿ, ನೆರೆಯ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಂದ ಈರುಳ್ಳಿ ಸರಬರಾಜು ಕೊರತೆಯಿಂದಾಗಿ ಈರುಳ್ಳಿ ದರದಲ್ಲಿ ಏರಿಕೆಯಾಗಿದೆ. ದರ ಏರಿಕೆಯನ್ನು ನಿಯಂತ್ರಿಸಲು ಉತ್ತರ ಭಾರತದಿಂದ ಈರುಳ್ಳಿಯನ್ನು ಖರೀದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಆಹಾರ ಇಲಾಖೆಯ ಅಧಿಕಾರಿಗಳನ್ನು ಈರುಳ್ಳಿ ಖರೀದಿಗಾಗಿ ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗಿದ್ದು,ಚೆನ್ನೈ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ರೇಶನ್ ಅಂಗಡಿಗಳ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ವೇಲು ಹೇಳಿದ್ದಾರೆ.