ಜಾಗತಿಕ ಮಾರುಕಟ್ಟೆಗಳಲ್ಲಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸರಬರಾಜು ಕೊರತೆಯಿಂದಾಗಿ ಕೇರಳದಲ್ಲಿ ನೈಸರ್ಗಿಕ ರಬ್ಬರ ದರದಲ್ಲಿ ದಾಖಲೆಯ ಏರಿಕೆಯಾಗಿ ಪ್ರತಿ ಕೆಜಿಗೆ 207 ರೂಪಾಯಿಗಳಿಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನೈಸರ್ಗಿಕ ರಬ್ಬರ ದರ ಪ್ರತಿ ಕೆಜಿಗೆ 222 ರೂಪಾಯಿಗಳಿಗೆ ಏರಿಕೆಯಾಗಿದ್ದರಿಂದ, ದೇಶದ ಮಾರುಕಟ್ಟೆಗಳಲ್ಲಿ ಸರಬರಾಜು ಕೊರತೆ ಎದುರಾಗುತ್ತಿರುವುದರಿಂದ ದರದಲ್ಲಿ ಏರಿಕೆಯಾಗಿದೆ ಎಂದು ಭಾರತೀಯ ರಬ್ಬರ್ ಡೀಲರ್ಸ್ ಫೆಡರೇಶನ್ ಅಧ್ಯಕ್ಷ ಜಾರ್ಜ್ ವ್ಯಾಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇರಳ ಮತ್ತು ಮಲಬಾರ್ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಭಾರಿ ಮಳೆಯಿಂದಾಗಿ ನೈಸರ್ಗಿಕ ರಬ್ಬರ ದರಗಳಲ್ಲಿ ಏರಿಕೆಯಾಗಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ತಿಂಗಳಲ್ಲಿ ನೈಸರ್ಗಿಕ ರಬ್ಬರ ದರ ಪ್ರತಿ ಕೆಜಿಗೆ 203 ರೂಪಾಯಿಗಳಿಗೆ ಏರಿಕೆಯಾಗಿತ್ತು. ಆದರೆ, ನಂತರ 196 ರೂಪಾಯಿಗಳಿಗೆ ಇಳಿಕೆಯಾಗಿತ್ತು.