2011ರಲ್ಲಿ ಬ್ಯಾಂಕ್ ಬಡ್ಡಿ ದರ ಹೆಚ್ಚಳ ನಿರೀಕ್ಷೆ:ಅಸೋಚಾಮ್
ನವದೆಹಲಿ, ಶುಕ್ರವಾರ, 24 ಡಿಸೆಂಬರ್ 2010( 18:03 IST )
ನಿರಂತರವಾಗಿ ಹಣದುಬ್ಬರ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ,ಮುಂದಿನ ವರ್ಷದಲ್ಲಿ ಬಡ್ಡಿ ದರ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ವರದಿಯಲ್ಲಿ ಬಹಿರಂಗಪಡಿಸಿದೆ.
ಹಣದುಬ್ಬರ ದರ ಏರಿಕೆಯಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್, ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿರುವುದರಿಂದ ಬಡ್ಡಿ ದರಗಳಲ್ಲಿ ಏರಿಕೆಯಾಗಲಿದೆ ಎಂದು ಅಸೋಚಾಮ್ ಮಂಡಳಿ ಆತಂಕ ವ್ಯಕ್ತಪಡಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗಳಿಗೆ ತಲುಪಿದೆ. ಈರುಳ್ಳಿ ದರ ಪ್ರತಿ ಕೆಜಿಗೆ 70 ರೂಪಾಯಿಗಳಿಗೆ ಏರಿಕೆ ಕಂಡಿದ್ದರಿಂದ ಆಹಾರ ಹಣದುಬ್ಬರ ಏರಿಕೆಯಾಗಿದೆ.
ಹಣದುಬ್ಬರ ದರ ಏರಿಕೆಯಾದಲ್ಲಿ ಆರ್‌ಬಿಐ ರೆಪೋ ದರಗಳನ್ನು ಹೆಚ್ಚಿಸುವುದರಿಂದ ಅನಿವಾರ್ಯವಾಗಿ ಬಡ್ಡಿ ದರಗಳಲ್ಲಿ ಏರಿಕೆಯಾಗಲಿದೆ ಎಂದು ಅಸೋಚಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.