ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಎಚ್‌ಇಎಲ್‌ಗೆ ಇಂಡಿಯಾಬುಲ್ಸ್‌ನಿಂದ 78 ಕೋಟಿ ರೂ.ಗುತ್ತಿಗೆ (BHEL | Indiabulls | Solar power projects | Contract)
Bookmark and Share Feedback Print
 
ಇಂಡಿಯಾಬುಲ್ಸ್‌ನ ಸೌರ ವಿದ್ಯುತ್ ಘಟಕಗಳ ಸ್ಥಾಪನೆಗಾಗಿ, ಸರಕಾರಿ ಸ್ವಾಮ್ಯದ ವಿದ್ಯುತ್ ಉಪಕರಣ ತಯಾರಿಕೆ ಸಂಸ್ಥೆ ಬಿಎಚ್ಇಎಲ್ 78 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದೆ.

ಪರಿಸರ ಸ್ನೇಹಿ 6 ಮೆಗಾವ್ಯಾಟ್ ಉತ್ಪಾದನೆಯ ಸೌರ ವಿದ್ಯುತ್ ಘಟಕಗಳ ಸ್ಥಾಪನೆಗಾಗಿ ಬಿಎಚ್‌ಇಎಲ್‌ಗೆ ಗುತ್ತಿಗೆಯನ್ನು ನೀಡಲಾಗಿದೆ ಎಂದು ಇಂಡಿಯಾಬುಲ್ಸ್‌ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜವಾಹರಲಾಲ್ ನೆಹರು ಸೋಲಾರ್ ಮಿಶನ್ ಯೋಜನೆಯಡಿ, ಮುಂಬರುವ 2020ರ ವೇಳೆಗೆ 20,000 ಮೆಗಾವ್ಯಾಟ್‌ ವಿದ್ಯುತ್ ಉತ್ಪಾದನೆಯ ಗುರಿಯ ಭಾಗವಾಗಿದೆ ಎಂದು ಮಾಹಿತಿ ನೀಡಿದೆ.

ಬಿಎಚ್‌ಇಎಲ್ ಸಂಸ್ಥೆಗೆ ಸೌರ ವಿದ್ಯುತ್ ಘಟಕದ ವಿನ್ಯಾಸ ,ಉತ್ಪಾದನೆ, ವಿದ್ಯುತ್ ಸರಬರಾಜು, ಮೇಲ್ವಿಚಾರಣೆ ಜವಾಬ್ದಾರಿಯನ್ನು ಸಂಸ್ಥೆ ವಹಿಸಲಿದೆ ಎಂದು ಇಂಡಿಯಾಬುಲ್ಸ್‌ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ