ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಹಾನಗರಗಳಲ್ಲಿ ಟೋಮ್ಯಾಟೋ ಬೆಳ್ಳುಳ್ಳಿ ದರ ಏರಿಕೆ (Tomato | Garlic | Prices | Onion | High rates)
Bookmark and Share Feedback Print
 
ದೇಶದಾದ್ಯಂತ ಈರುಳ್ಳಿ ದರ ಇಳಿಕೆಯಾಗುತ್ತಿದ್ದು, ಇದೀಗ ಟೋಮ್ಯಾಟೋ ಮತ್ತು ಬೆಳ್ಳುಳ್ಳಿ ದರಗಳಲ್ಲಿ ಏರಿಕೆಯಾಗುತ್ತಿರುವುದು ಮತ್ತೆ ಜನಸಾಮಾನ್ಯರು ಆತಂಕಪಡುವ ಪರಿಸ್ಥಿತಿ ಎದುರಾಗಿದೆ.

ರಾಜಧಾನಿ ನವದೆಹಲಿಯಲ್ಲಿ, ಕಳೆದ 15 ದಿನಗಳ ಹಿಂದೆ 15-20 ರೂಪಾಯಿಗಳಿದ್ದ ಟೋಮ್ಯಾಟೋ ದರ, ಇದೀಗ ಪ್ರತಿ ಕೆಜಿಗೆ 40-50 ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ವರ್ತಕರು ತಿಳಿಸಿದ್ದಾರೆ.

ನಗರದ ಆಝಾದ್‌ಪುರ್ ಮಾರುಕಟ್ಟೆಯಲ್ಲಿ ಟೋಮ್ಯಾಟೋ ಸಗಟು ದರದಲ್ಲಿ ಪ್ರತಿ ಕೆಜಿಗೆ 10-15 ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಟೋಮ್ಯಾಟೋ ಟ್ರೇಡರ್ಸ್ ಅಸೋಸಿಯೇಶನ್ ಅಧ್ಯಕ್ಷ ದರ್ಶನ್ ಲಾಲ್ ಅರೋರಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ