ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹೊಸ ವರ್ಷದಿಂದ ಫೋನ್ ಬ್ಯಾಂಕಿಂಗ್‌ಗೆ ಹೆಚ್ಚುವರಿ ಪಾಸ್‌ವರ್ಡ್ (Additional password | New Year | Phone banking | RBI guideline)
ಹೊಸ ವರ್ಷದಿಂದ ಫೋನ್ ಬ್ಯಾಂಕಿಂಗ್‌ಗೆ ಹೆಚ್ಚುವರಿ ಪಾಸ್‌ವರ್ಡ್
ನವದೆಹಲಿ, ಸೋಮವಾರ, 27 ಡಿಸೆಂಬರ್ 2010( 15:08 IST )
PTI
ಫೋನ್‌ಬ್ಯಾಂಕಿಂಗ್ ಮತ್ತಷ್ಟು ಸುರಕ್ಷಿತವಾಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದ ಮೇರೆಗೆ, ನೂತನ ವರ್ಷದಿಂದ ಯಾವುದೇ ಹಣದ ವ್ಯವಹಾರಗಳಿಗೆ ಕ್ರೆಡಿಟ್ ಕಾರ್ಡ್ ಬಳಕೆದಾರರು ಬ್ಯಾಂಕ್‌ಗಳಿಗೆ ಹೆಚ್ಚುವರಿ ಪಾಸ್‌ವರ್ಡ್ ನೀಡಬೇಕಾಗುತ್ತದೆ.
ಆರ್‌ಬಿಐ ಮಾರ್ಗದರ್ಶನ ಪ್ರಕಾರ, ಸ್ವಯಂಚಾಲಿತ ಐವಿಆರ್ (ಇಂಟರೆಕ್ಟಿವ್ ವೈಸ್ ರೆಪ್ಸಾನ್ಸ್) ಸೇವೆಗಳಿಗಾಗಿ,ಜನೆವರಿ 1 ರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರು ಒಂದಕ್ಕಿಂತ ಹೆಚ್ಚಿನ ಪಾಸ್‌ವರ್ಡ್‌ಗಳನ್ನು ಬ್ಯಾಂಕ್‌ಗಳು ಪಡೆಯುವುದು ಕಡ್ಡಾಯವಾಗಿದೆ.
ಏತನ್ಮಧ್ಯೆ, ಒಬ್ಬರಿಗೆ ಮಾತ್ರ ಬಳಕೆಯಾಗುವ ಒಟಿಪಿ ನೀಡಲಿದ್ದು,ಕೇವಲ ಎರಡು ಗಂಟೆಗಳ ಅವಧಿಗೆ ಮಾತ್ರ ಮಾನ್ಯ ಮಾಡಲಾಗುತ್ತದೆ.ಪ್ರತಿಯೊಂದು ಐವಿಆರ್ ವ್ಯವಹಾರಗಳಿಗೆ ಗ್ರಾಹಕರು ಪ್ರತ್ಯೇಕವಾದ ಒಟಿಪಿ ಯನ್ನು ನೀಡಬೇಕಾಗುತ್ತದೆ.
ಕಳೆದುಹೋದ ಅಥವಾ ಕಳ್ಳತನವಾದ ಕ್ರೆಡಿಟ್ ಕಾರ್ಡ್‌ಗಳನ್ನು ಇತರರು ಬಳಸಿಕೊಂಡು ವಂಚನೆ ಎಸಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ವಂಚನೆಗಳನ್ನು ತಡೆಯಲು ಹೆಚ್ಚುವರಿ ಪಾಸ್‌ವರ್ಡ್‌ಗಳ ಬಳಕೆಯನ್ನು ಆರ್‌ಬಿಐ ಕಡ್ಡಾಯವಾಗಿಸಿದೆ.
ಕ್ರೆಡಿಟ್ ಕಾರ್ಡ್ ಬಳಕೆದಾರರು ಯಾವುದೇ ವ್ಯವಹಾರಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸುವಾಗ ಗುರುತು ಪತ್ತೆ ವಿವರಗಳು ಹಾಗೂ ಕ್ರೆಡಿಟ್ ಕಾರ್ಡ್ ಹಿಂದಿರುವ ಸಹಿಯ ಹೋಲಿಕೆಯನ್ನು ಪರೀಕ್ಷಿಸುವುದು ಅಗತ್ಯವಾಗಿದೆ ಎಂದು ಆರ್‌ಬಿಐ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಜನೆವರಿ 1 ರಿಂದ ಫೋನ್ ಬ್ಯಾಂಕಿಂಗ್ ಹೊಂದಿರುವ ಗ್ರಾಹಕರ ಮೊಬೈಲ್ ಹಾಗೂ ಇ-ಮೇಲ್ ವಿಳಾಸಕ್ಕೆ ನೂತನ ಪಾಸ್‌ವರ್ಡ್‌ನ್ನು ರವಾನಿಸಲಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.