ದೇಶದ ಹಾಗೂ ಸಾಗರೋತ್ತರ ರಾಷ್ಟ್ರಗಳ ಮುಸ್ಲಿಂ ಹೂಡಿಕೆದಾರರ ಆರ್ಥಿಕ ವಹಿವಾಟು ಗಮನದಲ್ಲಿಟ್ಟುಕೊಂಡು ಶರಿಯಾ ಶೇರು ಸೂಚ್ಯಂಕವನ್ನು ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ ಜಾರಿಗೆ ತಂದಿದೆ.
ಮದ್ಯ, ತಂಬಾಕು ಉತ್ಪನ್ನಗಳು ಹಾಗೂ ಶಸ್ತ್ರಾಸ್ತ್ರಗಳ ಮಾರಾಟದಲ್ಲಿ ಅಥವಾ ಬಡ್ಡಿಯ ಲಾಭಕ್ಕಾಗಿ ಹಣ ಹೂಡಿಕೆಯಾಗಬಾರದು ಎನ್ನುವ ಇಸ್ಲಾಮಿಕ್ ಕಾನೂನು ಪಾಲಿಸಲಾಗುತ್ತಿದೆ ಎನ್ನುವುದನ್ನು ಹೂಡಿಕೆದಾರರು ಅಥವಾ ಹೂಡಿಕೆ ಕಂಪೆನಿಗಳು ಖಚಿತಪಡಿಸಿದ ನಂತರವೆ, ಶರಿಯಾ ಶೇರುಸೂಚ್ಯಂಕದಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಲಾಗುತ್ತದೆ.
ಮುಂಬೈ ಶೇರುಪೇಟೆಯ ಸೂಚ್ಯಂಕದ ವ್ಯವಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಮಧು ಕನ್ನನ್ ಮಾತನಾಡಿ, ಭಾರತದ ಮತ್ತು ಸಾಗರೋತ್ತರ ರಾಷ್ಟ್ರಗಳ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಇಸ್ಲಾಮಿಕ್ ಹೂಡಿಕೆದಾರರನ್ನು ಆಕರ್ಷಿಸಲು ಶರಿಯಾ ಸೂಚ್ಯಂಕವನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಶರಿಯಾ ಸೂಚ್ಯಂಕದಲ್ಲಿ ಮ್ಯೂಚುವಲ್ ಫಂಡ್, ಇಟಿಎಫ್(ಎಕ್ಸ್‌ಚೇಂಜ್ ಟ್ರೆಡೆಡ್ ಫಂಡ್ಸ್)ಗಳಲ್ಲಿ ಹೂಡಿಕೆ ಮಾಡಲು ಪರವಾನಿಗಿ ನೀಡಿದಂತಾಗುತ್ತದೆ ಎಂದು ಶೇರುಪೇಟೆಯ ಸೂಚ್ಯಂಕದ ವ್ಯವಸ್ಥಾಪಕರ ನಿರ್ದೆಶಕರಾದ ಮಧು ಕನ್ನನ್ ವಿವರಣೆ ನೀಡಿದ್ದಾರೆ.