ಕಳೆದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆಗೆ18.98 ಮಿಲಿಯನ್ ನೂತನ ಗ್ರಾಹಕರನ್ನು ಸೇರ್ಪಡೆಗೊಳಿಸಲಾಗಿದ್ದು, ದೇಶದ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 706.69 ಮಿಲಿಯನ್‌ಗಳಿಗೆ ತಲುಪಿದಂತಾಗಿದೆ.
ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಪ್ರಕಾರ, ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಶೇ.2.76ರಷ್ಟು ಏರಿಕೆಯಾಗಿದ್ದು, ಅಕ್ಟೋಬರ್ ತಿಂಗಳ ಅವಧಿಯಲ್ಲಿ 706.69 ಮಿಲಿಯನ್‌ಗಳಿಗೆ ತಲುಪಿದೆ. ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 687.71 ಮಿಲಿಯನ್‌ಗಳಿಗೆ ತಲುಪಿತ್ತು.
ಇದರೊಂದಿಗೆ, ಮೊಬೈಲ್ ಮತ್ತು ಸ್ಥಿರ ದೂರವಾಣಿ ಗ್ರಾಹಕರ ಒಟ್ಟು ಸಂಖ್ಯೆ 742.12 ಮಿಲಿಯನ್‌ಗಳಿಗೆ ತಲುಪಿದೆ. ದೇಶದ ಒಟ್ಟು ಟೆಲಿ-ಸಾಂದ್ರತೆ ಅಕ್ಟೋಬರ್ ತಿಂಗಳಾಂತ್ಯಕ್ಕೆ ಶೇ.62.51ಕ್ಕೆ ತಲುಪಿದೆ.
ಮೊಬೈಲ್ ಫೋನ್‌ಗಳ ಸಂಪರ್ಕದಲ್ಲಿ ಭಾರ್ತಿ ಏರ್‌ಟೆಲ್ ಅಗ್ರಸ್ಥಾನದಲ್ಲಿದ್ದು, ಅಕ್ಟೋಬರ್ ತಿಂಗಳಲ್ಲಿ 3 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದೆ. ಕಂಪೆನಿಯ ಒಟ್ಟು ಗ್ರಾಹಕರ ಸಂಖ್ಯೆ 146 ಮಿಲಿಯನ್‌ಗಳಿಗೆ ತಲುಪಿದೆ.
ವೋಡಾಫೋನ್ ಎಸ್ಸಾರ್ ಸಂಸ್ಥೆ, ಅಕ್ಟೋಬರ್ ತಿಂಗಳ ಅವಧಿಯಲ್ಲಿ 2.49 ಮಿಲಿಯನ್ ನೂತನ ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದು, ಒಟ್ಟು 118 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಯುನಿನಾರ್ ಟೆಲಿಕಾಂ ಕಂಪೆನಿ 2.48 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದೆ ಎಂದು ಟ್ರಾಯ್ ಅಧಿಕಾರಿಗಳು ತಿಳಿಸಿದ್ದಾರೆ.