ದುಬೈಗೆ ಭೇಟಿ ನೀಡಿ ಶಾಪಿಂಗ್ ಇಚ್ಚೆಯುಳ್ಳ ಕನಸುಗಾರರಿಗೆ ಇಂತಹ ಅವಕಾಶ ಮತ್ತೆ ದೊರೆಯುವುದಿಲ್ಲ. 15ನೇ ವಾರ್ಷಿಕ ದುಬೈ ಶಾಪಿಂಗ್ ಫೆಸ್ಟಿವಲ್(ಡಿಎಸ್‌ಎಫ್) ಜನೆವರಿ 20ರಿಂದ ಆರಂಭವಾಗಲಿದ್ದು, ಫೆಬ್ರವರಿ 20ಕ್ಕೆ ಮುಕ್ತಾಯಗೊಳ್ಳಲಿದೆ.
ಎಮಿರೇಟ್ಸ್ ಕಂಪೆನಿ, ದುಬೈ ಶಾಪಿಂಗ್ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೆ 19,990 ಆರಂಭಿಕ ದರದ ಪ್ಯಾಕೇಜ್ ನಿಗದಿಪಡಿಸಿದ್ದು, ನಾಲ್ಕು-ರಾತ್ರಿ ಪ್ಯಾಕೇಜ್ ಪಡೆದವರಿಗೆ ಒಂದು ದಿನದ ರಾತ್ರಿ ಉಚಿತ ವಾಸದ ವ್ಯವಸ್ಥೆಯ ಜೊತೆಗೆ ಎಕಾನಾಮಿ ದರದ ರಿಟರ್ನ್ ಟಿಕೆಟ್ ಕೂಡಾ ಉಚಿತವಾಗಿ ಒದಗಿಸಲಿದೆ.
ಪ್ರವಾಸಿಗರು ಟ್ರಾವೆಲ್ ಏಜೆಂಟರು ಹಾಗೂ ವಿಶ್ವದಾದ್ಯಂತವಿರುವ ಎಮಿರೇಟ್ಸ್ ಕಚೇರಿಗಳಲ್ಲಿ ನಿಮ್ಮ ಆಯ್ಕೆಯ ಹೋಟೆಲ್‌ಗಳು, ವೈಮಾನಿಕ ಸಂಸ್ಥೆ ಮತ್ತು ಇತರ ವಿವರಗಳನ್ನೊಳಗೊಂಡ ಆಫರ್ ಟಿಕೆಟ್‌ಗಳನ್ನು ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹಾಲಿಡೇ ಪ್ಯಾಕೇಜ್‌ನಲ್ಲಿ ಮೂರು ದಿನಗಳ ವಾಸ್ತವ್ಯ ದರದಲ್ಲಿ ನಾಲ್ಕು ರಾತ್ರಿಗಳ ವಾಸ್ತವ್ಯ ಹೂಡಬಹುದಾಗಿದೆ. ದುಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಆಗಮಿಸಿದ ಪ್ರವಾಸಿಗರಿಗೆ ಶಾಪಿಂಗ್ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಅರೇಬಿಯನ್ ಅಡ್ವೆಂಚರ್ಸ್, ವೆಲ್‌ಕಂ ಪಾರ್ಕ್, ಏರ್‌ಪೋರ್ಟ್‌ನಿಂದ ವಾಸ್ತವ್ಯ ಹೂಡಿರುವ ಹೋಟೆಲ್‌ಗೆ ಬಾಡಿಗೆ ಕಾರಿನ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ವಿವರಣೆ ನೀಡಿದೆ.
1996ರಲ್ಲಿ ಆರಂಭವಾದ ದುಬೈ ಶಾಪಿಂಗ್ ಫೆಸ್ಟಿವಲ್, ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದುಬೈ ಶಾಪಿಂಗ್ ಫೆಸ್ಟಿವಲ್ ಐಷಾರಾಮಿ, ಅತ್ಯುನ್ನತ ಗುಣಮಟ್ಟದ ಬ್ರ್ಯಾಂಡ್‌ಗಳಿಗೆ ಹೆಸರುವಾಸಿಯಾಗಿದೆ ಎಂದು ಎಮಿರೇಟ್ಸ್‌ನ ಭಾರತ ಮತ್ತು ನೇಪಾಳ ಉಪಾಧ್ಯಕ್ಷ ಒರ್ಹಾನ್ ಅಬ್ಬಾಸ್ ತಿಳಿಸಿದ್ದಾರೆ.
ದುಬೈಗೆ ಭೇಟಿ ನೀಡುವ ಪ್ರವಾಸಿಗರು ತೆರಿಗೆ ರಹಿತ ಶಾಪಿಂಗ್ ಲಾಭವನ್ನು ಪಡೆಯಬಹುದಾಗಿದೆ. ಶಾಪಿಂಗ್ ಫೆಸ್ಟಿವಲ್‌ನಲ್ಲಿ ಗ್ರಾಹಕರು ಶೇ.50 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಪ್ರತಿಯೊಂದು ವಸ್ತುವಿನ ಖರೀದಿಯಿಂದ ನಗದು ಬಹುಮಾನಪನ್ನು ಕೂಡಾ ಪಡೆಯಬಹುದಾಗಿದೆ ಎಂದು ದಕ್ಷಿಣ ಭಾರತದ ಎಮಿರೇಟ್ಸ್ ಏರ್‌ಲೈನ್ಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಸುಕುಮಾರನ್ ಹೇಳಿದ್ದಾರೆ.