ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಕಬ್ಬಿಣ ಅದಿರು ದರದಲ್ಲಿ ಶೇ.5 ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಎನ್‌ಎಂಡಿಸಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಣಾ ಸೋಮ್ ಹೇಳಿದ್ದಾರೆ.
ಕಬ್ಬಿಣ ಅದಿರು, ತಾಮ್ರ, ಬೆಳ್ಳಿ ಮತ್ತು ಚಿನ್ನದ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ದರದ ಮೇಲೆ ಅವಲಂಬಿಸಿರುತ್ತದೆ.ಅಂತಾರಾಷ್ಟ್ರೀಯ ದರಗಳು ಪ್ರತಿ ತ್ರೈಮಾಸಿಕ ಅವಧಿಗೆ ಪರಿಷ್ಕರಿಸಲಾಗುತ್ತದೆ. ಆದರಂತೆ, ದೇಶಿಯ ದರಗಳಲ್ಲಿ ಕೂಡಾ ಪ್ರತಿ ತ್ರೈಮಾಸಿಕ ಅವಧಿಗೆ ಬದಲಾಗುತ್ತಿರುತ್ತದೆ.ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಕಬ್ಬಿಣ ಅದಿರು ದರದಲ್ಲಿ ಶೇ.7.76ರಷ್ಟು ಏರಿಕೆಯಾಗಲಿದೆ ಎಂದು ಸೋಮ್ ತಿಳಿಸಿದ್ದಾರೆ.
ಏತನ್ಮಧ್ಯೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳವಾದ ದರವನ್ನು ಸಂಪೂರ್ಣವಾಗಿ ಗ್ರಾಹಕರ ಮೇಲೆ ಹೇರುವುದಿಲ್ಲ. ಅಲ್ಪ ದರವನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದ್ದಾರೆ.
ಎನ್‌ಎಂಡಿಸಿ ಕಂಪೆನಿ, ಪ್ರಸ್ತುತ 17,500 ಕೋಟಿ ರೂಪಾಯಿಗಳ ನಗದು ಮೀಸಲು ಹಣವನ್ನು ಹೊಂದಿದ್ದು, ಮುಂದಿನ ವರ್ಷದಲ್ಲಿ 3,300 ಕೋಟಿ ರೂಪಾಯಿ ಹೂಡಿಕೆ ಯೋಜನೆಯನ್ನು ಹೊಂದಿದೆ ಎಂದು ಎನ್‌ಎಂಡಿಸಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಣಾ ಸೋಮ್ ಹೇಳಿದ್ದಾರೆ.