ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 40-50 ರೂಪಾಯಿಗಳಿಗೆ ಸ್ಥಿರವಾಗಿದೆ. ಆದರೆ, ಚೆನ್ನೈ ನಗರದಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 20 ರೂಪಾಯಿಗಳಿಗೆ ಇಳಿಕೆ ಕಂಡಿದೆ. ಮುಂಬೈ ಮತ್ತು ಕೋಲ್ಕತಾ ನಗರಗಳಲ್ಲಿ ಟೋಮ್ಯಾಟೋ ಮತ್ತು ಬೆಳ್ಳುಳ್ಳಿ ದರಗಳಲ್ಲಿ ಇಳಿಕೆಯಾಗಿದೆ.
ಹಿಂದಿನ ದಿನದಂದು ನಗರದ ಸಗಟು ಮಾರುಕಟ್ಟೆಗೆ 10 ಲಾರಿಗಳ ಬದಲಾಗಿ ಕೇವಲ 3 ಈರುಳ್ಳಿ ಲಾರಿಗಳು ಆಗಮಿಸಿದ್ದು, ಸರಬರಾಜು ಕೊರತೆಯಿಂದಾಗಿ ಈರುಳ್ಳಿ ದರದಲ್ಲಿ ಏರಿಕೆಯಾಗಿತ್ತು ಎಂದು ಚೆನ್ನೈ ನಗರದ ವರ್ತಕರು ತಿಳಿಸಿದ್ದಾರೆ.
ಮಂಜಿನಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ಸರಬರಜಾು ಕೊರತೆಯಿಂದಾಗಿ ದೆಹಲಿಯ ಅಜಾದ್‌ಪುರ್ ಮಾರುಕಟ್ಟೆಯಲ್ಲಿ ಕೂಡಾ ಈರುಳ್ಳಿ ದರದಲ್ಲಿ ಪ್ರತಿ ಕೆಜಿಗೆ 3 ರೂಪಾಯಿ ಏರಿಕೆಯಾಗಿತ್ತು.
ಆಜಾದ್‌ಪುರ್ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 12-40 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ವರ್ತಕರು ತಿಳಿಸಿದ್ದಾರೆ.