ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಈರುಳ್ಳಿಯ ನಂತರ ಇದೀಗ, ಅಮುಲ್ ಹಾಲಿನ ದರ ಹೆಚ್ಚಳ ಘೋಷಣೆ (GCMMF | Milk | Amul | Hikes prices)
Bookmark and Share Feedback Print
 
ತರಕಾರಿ ದರಗಳ ಏರಿಕೆಯ ನಂತರ, ಇದೀಗ ಹಾಲಿನ ದರ ಏರಿಕೆಯ ಭೀತಿಯನ್ನು ಎದುರಿಸುವ ಸ್ಥಿತಿ ಜನಸಾಮಾನ್ಯರದಾಗಿದೆ.

ಗುಜರಾತ್ ಕೋ-ಅಪರೇಟಿವ್ ಮಿಲ್ಕ್ ಮಾರ್ಕೆಂಟಿಂಗ್ ಫೆಡರೇಶನ್(ಜಿಸಿಎಂಎಂಎಫ್) ಮಾರ್ಕೆಟಿಂಗ್ ಡೈರಿ ಪ್ರೊಡಕ್ಟ್ಸ್ ಅಮುಲ್ ಬ್ರ್ಯಾಂಡ್‌ನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ದರ ಹೆಚ್ಚಳಗೊಳಿಸುವುದಾಗಿ ಘೋಷಿಸಿದೆ.

ವಿವಿಧ ಬ್ರ್ಯಾಂಡ್‌ಗಳ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 1 ರೂಪಾಯಿಗಳಿಂದ 2 ರೂಪಾಯಿಗಳಿಗೆ ಏರಿಕೆಗೊಳಿಸಿದ್ದು, ಡಿಸೆಂಬರ್ 30 ರಿಂದ ಗುಜರಾತ್ ಮತ್ತು ದೆಹಲಿಯಲ್ಲಿ ಜಾರಿಗೆ ಬರಲಿದೆ. ಇತರ ನಗರಗಳಲ್ಲಿ ಜನೆವರಿ 3 ರಿಂದ ದರ ಏರಿಕೆ ಜಾರಿಯಾಗಲಿದೆ ಎಂದು ಜಿಸಿಎಂಎಂಎಫ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ತಿಳಿಸಿದ್ದಾರೆ.

ಸಂಸ್ಥೆಯ ಬ್ರ್ಯಾಂಡ್‌ಗಳಾದ 'ಗೋಲ್ಟ್' ಮತ್ತು 'ಶಕ್ತಿ' ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ದರ, ತಾಝಾ, ಸ್ಲಿಮ್ ಮತ್ತು ಟ್ರಿಮ್ ದರಗಳಲ್ಲಿ 1 ರೂಪಾಯಿ ಹೆಚ್ಚಳ ಘೋಷಿಸಲಾಗಿದೆ ಎಂದು ಸೋಧಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ