ಅಮದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳದಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 4 ಪೈಸೆ ಕುಸಿತವಾಗಿ 45.13 ರೂಪಾಯಿಗಳಿಗೆ ತಲುಪಿದೆ.
ಆದಾಗ್ಯೂ, ಡಾಲರ್ ಎದುರಿಗೆ ಏಷ್ಯಾ ಕರೆನ್ಸಿಗಳ ಚೇತರಿಕೆ ಹಾಗೂ ಶೇರುಪೇಟೆಯ ಉತ್ತಮ ವಹಿವಾಟಿನ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಮತ್ತಷ್ಟು ಕುಸಿತವಾಗುವುದನ್ನು ತಡೆದಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ 15 ಪೈಸೆ ಏರಿಕೆ ಕಂಡು 45.09/10 ರೂಪಾಯಿಗಳಿಗೆ ತಲುಪಿತ್ತು. ಆದರೆ, ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 4 ಪೈಸೆ ಕುಸಿತವಾಗಿ 45.13 ರೂಪಾಯಿಗಳಿಗೆ ತಲುಪಿದೆ.
ಅಮದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳ ಹಾಗೂ ಡಾಲರ್ ಎದುರಿಗೆ ಏಷ್ಯಾ ಕರೆನ್ಸಿಗಳ ಚೇತರಿಕೆ ಹಾಗೂ ಶೇರುಪೇಟೆಯ ಉತ್ತಮ ವಹಿವಾಟಿನ ಹಿನ್ನೆಲೆಯಲ್ಲಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡಿದೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 76.37 ಪಾಯಿಂಟ್‌ಗಳ ಏರಿಕೆ ಕಂಡು 20,101.79 ಅಂಕಗಳಿಗೆ ತಲುಪಿದೆ.