ಕಾರ್ಪೋರೇಟ್ ಕಂಪೆನಿಗಳ ತೆರಿಗೆಯನ್ನು ಇಳಿಕೆಗೊಳಿಸುವಂತೆ, ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.
ಪ್ರಸ್ತುತ ಕಾರ್ಪೋರೇಟ್ ಕಂಪೆನಿಗಳ ತೆರಿಗೆ ಶೇ.30ರಷ್ಟಿದ್ದು, ಶೇ.25ಕ್ಕೆ ಇಳಿಕೆಗೊಳಿಸುವಂತೆ ಶಿಫಾರಸ್ಸು ಮಾಡಿದ್ದು,ಇದರಿಂದಾಗಿ ಕಂಪೆನಿಗಳ ಆರ್ಥಿಕತೆಯಲ್ಲಿ ಹೆಚ್ಚಳವಾಗುವುದರಿಂದ ಉದ್ಯೋಗಿಗಳ ನೇಮಕಾತಿಯಲ್ಲಿ ಏರಿಕೆಯಾಗಲಿದೆ ಎಂದು ಪೂರ್ವ ಬಜೆಟ್‌ಗೆ ಮುನ್ನ ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿಯವರಿಗೆ ಮನವಿ ಸಲ್ಲಿಸಿದೆ.
ಕಳೆದ ಹಲವಾರು ವರ್ಷಗಳಿಂದ ಕಾರ್ಪೋರೇಟ್ ತೆರಿಗೆಗಳನ್ನು ಕಡಿತಗೊಳಿಸುವಂತೆ ಅಸೋಚಾಮ್ ಸಂಘಟನೆ ಸರಕಾರಕ್ಕೆ ಒತ್ತಾಯಿಸುತ್ತಿದೆ.
ಕಾರ್ಪೋರೇಟ್ ಕಂಪೆನಿಗಳ ತೆರಿಗೆಯನ್ನು ಶೇ.25ರಷ್ಟು ಕಡಿತಗೊಳಿಸುವುದರಿಂದ, ಪಾಶ್ಚಾತ್ಯ ರಾಷ್ಟ್ರಗಳ ಕಂಪೆನಿಗಳೊಂದಿಗೆ ದೇಶಿಯ ಕಂಪೆನಿಗಳು ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ವರದಿಯಲ್ಲಿ ಬಹಿರಂಗಪಡಿಸಿದೆ.