ದೇಶದ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ನೋಕಿಯಾಗೆ ಅಗ್ರಸ್ಥಾನ
ಬೆಂಗಳೂರು, ಬುಧವಾರ, 29 ಡಿಸೆಂಬರ್ 2010( 16:08 IST )
PTI
ಜಾಗತಿಕ ಮೊಬೈಲ್ ಹ್ಯಾಂಡ್‌ಸೆಂಟ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಫಿನ್ನಿಶ್ ಮೂಲದ ನೋಕಿಯಾ ಕಂಪೆನಿ, ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ.31.5ರಷ್ಟು ಪಾಲನ್ನು ಹೊಂದುವ ಮೂಲಕ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಹೊಂದಿದೆ.
ಚೀನಾದ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಕಂಪೆನಿ, ದೇಶಿಯ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕೊರಿಯಾದ ಕಂಪೆನಿ ಸಾಮ್‌ಸುಂಗ್ ಮೂರನೇ ಸ್ಥಾನದಲ್ಲಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ವರದಿಯಲ್ಲಿ ಬಹಿರಂಗಪಡಿಸಿದೆ.
2010ರ ವರ್ಷಾಂತ್ಯಕ್ಕೆ 155.9 ಮಿಲಿಯನ್ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಮಾರಾಟದ ಗುರಿಯನ್ನು ತಲುಪುವ ನಿರೀಕ್ಷೆಗಳಿವೆ ಎಂದು ಮೊಬೈಲ್ ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸ್ಮಾರ್ಟ್‌ಫೋನ್‌ಗಳ ದರಗಳು ನಿರಂತರವಾಗಿ ಇಳಿಕೆಯಾಗುತ್ತಿರುವುದರಿಂದ, ಮಾರುಕಟ್ಟೆಯಲ್ಲಿ ಭಾರಿ ಸ್ಪರ್ಧೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ಐಡಿಸಿ ವರದಿಯಲ್ಲಿ ಬಹಿರಂಗಪಡಿಸಿದೆ.