ಕೈಗಾರಿಕೋದ್ಯಮ ಕ್ಷೇತ್ರ ಹಾಗೂ ಸಂಗ್ರಹಕಾರರಿಂದ ಬೇಡಿಕೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ, ಬೆಳ್ಳಿಯ ದರ ಪ್ರತಿ ಕೆಜಿಗೆ 46,200 ರೂಪಾಯಿಗಳಿಗೆ ತಲುಪಿದೆ.
ಮದುವೆ ಸೀಜನ್ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಹಕರ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ ಚಿನ್ನದ ದರದಲ್ಲಿ ಕೂಡಾ ಏರಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 165 ರೂಪಾಯಿಗಳ ಏರಿಕೆಯಾಗಿ 20,955 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟಿನಿಂದಾಗಿ ಕೈಗಾರಿಕೋದ್ಯಮ ಕ್ಷೇತ್ರದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಬೆಳ್ಳಿ ದರ ಪ್ರತಿ ಕೆಜಿಗೆ 1200 ರೂಪಾಯಿಗಳ ಏರಿಕೆಯಾಗಿ 46,200 ರೂಪಾಯಿಗಳಿಗೆ ತಲುಪಿದೆ.
ಶೇರುಪೇಟೆಯ ತೊಳಲಾಟದಿಂದಾಗಿ, ಹೂಡಿಕೆದಾರರು ಚಿನ್ನವನ್ನು ಪರ್ಯಾಯ ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದರಿಂದ. ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಚಿನಿವಾರಪೇಟೆಯ ವರ್ತಕರು ತಿಳಿಸಿದ್ದಾರೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 22.10 ಡಾಲರ್‌ಗಳ ಏರಿಕೆಯಾಗಿ 1406.20 ಡಾಲರ್‌ಗಳಿಗೆ ತಲುಪಿದೆ.