ದೇಶದ ಮೆಟ್ರೋ ನಗರಗಳಲ್ಲಿ ಈರುಳ್ಳಿ ದರ ಸ್ಥಿರವಾಗಿದೆ. ಆದರೆ, ಚೆನ್ನೈ ನಗರದಲ್ಲಿ ಈರುಳ್ಳಿ ದರದಲ್ಲಿ ಏರಿಕೆಯಾಗಿದ್ದರೇ ಮುಂಬೈಯಲ್ಲಿ ಬೆಳ್ಳುಳ್ಳಿ ದರದಲ್ಲಿ ಏರಿಕೆಯಾಗಿದೆ.
ಚೆನ್ನೈ ನಗರದಲ್ಲಿ ಸರಬರಾಜು ಕೊರತೆಯಿಂದಾಗಿ ಪ್ರತಿ ಕೆಜಿ ಈರುಳ್ಳಿ ದರ 60 ರೂಪಾಯಿಗಳಿಗೆ ಏರಿಕೆಯಾಗಿದ್ದು,ಮಾರುಕಟ್ಟೆಯಲ್ಲಿ ದಿನವೊಂದಕ್ಕೆ 10 ಲಾರಿ ಈರುಳ್ಳಿಗಳ ಅಗತ್ಯವಿದೆ. ಆದರೆ, ಕೇವಲ ನಾಲ್ಕು ಲಾರಿಗಳ ಈರುಳ್ಳಿ ಮಾತ್ರ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ.
ಕಳೆದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಪ್ರತಿ ಕೆಜಿ ಈರುಳ್ಳಿ ದರ 35-40 ರೂಪಾಯಿಗಳಿಗೆ ತಲುಪಿತ್ತು.ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದ್ದರಿಂದ ಪ್ರತಿ ಕೆಜಿ ಈರುಳ್ಳಿ ದರ 70-80 ರೂಪಾಯಿಗಳಿಗೆ ಏರಿಕೆ ಕಂಡಿತ್ತು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಲಾಸಲ್‌ಗಾಂವ್ ಮತ್ತು ಪಿಂಪಲ್‌ಗಾಂವ್ ತಾಲ್ಲೂಕುಗಳಲ್ಲಿ ಸಗಟು ಈರುಳ್ಳಿ ದರ, ಪ್ರತಿ ಕೆಜಿಗೆ 12 ರೂಪಾಯಿಗಳಿಗೆ ಇಳಿಕೆ ಕಂಡಿದೆ.
ಮೆಟ್ರೋ ನಗರಗಳಲ್ಲಿ ಟೋಮ್ಯಾಟೋ ದರ ಪ್ರತಿ ಕೆಜಿಗೆ 25-40 ರೂಪಾಯಿಗಳಿಗೆ ಸ್ಥಿರವಾಗಿದೆ. ಆದರೆ, ಮುಂಬೈಯಲ್ಲಿ ಬೆಳ್ಳುಳ್ಳಿ ದರ ಪ್ರತಿ ಕೆಜಿಗೆ 100 ರೂಪಾಯಿಗಳಿಗೆ ತಲುಪಿದೆ. ಚೆನ್ನೈ ನಗರದಲ್ಲಿ ಬೆಳ್ಳುಳ್ಳಿ ದರ ಪ್ರತಿ ಕೆಜಿಗೆ 60 ರೂಪಾಯಿಗಳಿಗೆ ಇಳಿಕೆ ಕಂಡಿದೆ.