ತೈಲ ಸೂಚ್ಯಂಕ ಏರಿಕೆಯ ಮಧ್ಯೆಯು ತರಕಾರಿ ದರಗಳಲ್ಲಿ ಏರಿಕೆಯಾಗಿದ್ದರಿಂದ ಆಹಾರ ಹಣದುಬ್ಬರ ದರ 10 ವಾರಗಳ ಗರಿಷ್ಠ ಏರಿಕೆ ಕಂಡಿದೆ.
ನವೆಂಬರ್ ತಿಂಗಳ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.7.48ಕ್ಕೆ ಏರಿಕೆ ಕಂಡಿತ್ತು. ಡಿಸೆಂಬರ್ ತಿಂಗಳ ಅವಧಿಯಲ್ಲಿ ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಇತರ ತರಕಾರಿ ದರಗಳ ಏರಿಕೆಯಿಂದಾಗಿ ಆಹಾರ ಹಣದುಬ್ಬರದಲ್ಲಿ ಏರಿಕೆಯಾಗಿದೆ.
ಪ್ರಸಕ್ತ ವಾರಂತ್ಯಕ್ಕೆ ಆಹಾರ ಹಣದುಬ್ಬರ ದರ ಶೇ. 14.44 ರಷ್ಟು ಏರಿಕೆ ಕಂಡಿದೆ. ತೈಲ ಸೂಚ್ಯಂಕ ಶೇ.11.63ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಆಹಾರ ಹಣದುಬ್ಬರ ದರ ಏರಿಕೆ ಆತಂಕಕಾರಿಯಾಗಿದೆ ಎಂದು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಮುಖ್ಯಸ್ಥ ಅನಂತ್ ನಾರಾಯಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್, ವರ್ಷಾಂತ್ಯಕ್ಕೆ ಆಹಾರ ಹಣದುಬ್ಬರ ದರ ಶೇ.5.5ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರಕ್ಕೆ ಹೋಲಿಸಿದಲ್ಲಿ ಪ್ರಾಥಮಿಕ ವಸ್ತುಗಳ ದರ ಶೇ.15.35ರಿಂದ ಶೇ.17.24ಕ್ಕೆ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ಬಿಡುಗಡೆಗೊಳಿಸಿದ ಅಂಕಿ ಅಂಶಗಳಲ್ಲಿ ಬಹಿರಂಗಪಡಿಸಲಾಗಿದೆ..