ಸಿಟಿ ಬ್ಯಾಂಕ್ ವಂಚನೆ:ಪ್ರಮುಖ ಆರೋಪಿ ಶಿವರಾಜ್ ಪುರಿ ಬಂಧನ
ಗುರ್ಗಾಂವ್, ಗುರುವಾರ, 30 ಡಿಸೆಂಬರ್ 2010( 16:34 IST )
ನಗರದ ಸಿಟಿ ಬ್ಯಾಂಕ್‌ಗೆ 250 ಕೋಟಿ ರೂಪಾಯಿಗಳನ್ನು ವಂಚಿಸಿದ ಪ್ರಮುಖ ಆರೋಪಿ ಶಿವರಾಜ್ ಪುರಿಯನ್ನು, ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಮಾತನಾಡಿದ ಆರೋಪಿ ಪುರಿ, ನಾನು ಸಂಪೂರ್ಣ ವಿವರಗಳನ್ನು ಪೊಲೀಸರಿಗೆ ನೀಡಿದ್ದೇನೆ. ನ್ಯಾಯಾಂಗದಲ್ಲಿ ನ್ಯಾಯ ದೊರೆಯುವ ವಿಶ್ವಾಸವಿದ್ದು, ಸತ್ಯಾಂಶ ಶೀಘ್ರದಲ್ಲಿ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.
ಪೊಲೀಸ್ ಆಯುಕ್ತ ಎಸ್.ಎಸ್.ದೆಸ್ವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಸಿಟಿ ಬ್ಯಾಂಕ್‌ಗೆ 300 ಕೋಟಿ ರೂಪಾಯಿ ವಂಚನೆ ಎಸಗಲಾಗಿದೆ. ಆರೋಪಿಗಳ ಪತ್ತೆಗಾಗಿ 40 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.