ಆಹಾರ ಬೇಡಿಕೆ-ಪೂರೈಕೆಯ ಕೊರತೆಯ ಹಿನ್ನೆಲೆಯಲ್ಲಿ, ಆಹಾರ ಹಣದುಬ್ಬರ ದರ ಏರಿಕೆಯಾಗಿರುವುದು ಇಕ್ಕಟ್ಟಿಗೆ ಸಿಲುಕಿಸುವ ಅಂಶವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ.
ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಆದರೆ, ಜಾಗತಿಕ ಕಚ್ಚಾ ತೈಲ ದರ ಹೆಚ್ಚಳ ಹಾಗೂ ದೇಶದ ಅಗತ್ಯ ಆಹಾರ ವಸ್ತುಗಳ ದರ ಏರಿಕೆಯಿಂದಾಗಿ ಹಣದುಬ್ಬರ ದರದ ಒತ್ತಡಗಳು ಹೆಚ್ಚಾಗುತ್ತಿವೆ ಎಂದು ಆರ್‌ಬಿಐ ಆರ್ಥಿಕ ಸ್ಥಿರತೆ ಎರಡನೇ ವರದಿಯಲ್ಲಿ ಬಹಿರಂಗಪಡಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ, ಚಿನ್ನ, ಕಬ್ಬಿಣ ಹತ್ತಿ ಸೇರಿದಂತೆ ಇತರ ವಸ್ತುಗಳ ದರಗಳು ಗಗನಕ್ಕೇರಿದ್ದರಿಂದ,ಹಣದುಬ್ಬರ ದರ ಕೂಡಾ ಏರಿಕೆಯತ್ತ ಸಾಗಿದೆ.
ಕಚ್ಚಾ ತೈಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಪ್ರತಿ ಬ್ಯಾರೆಲ್‌ಗೆ 92 ಡಾಲರ್‌ಗಳಿಗೆ ಏರಿಕೆಯಾಗಿದೆ.