ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಬ್ಬಾ...ಸಹರಾದಿಂದ 3,275 ಕೋಟಿಗೆ ಇಂಗ್ಲೆಂಡ್ ಹೋಟೆಲ್ ಖರೀದಿ! (Subrata Roy | Sahara | Royal Bank of Scotland | Land Rover | Jaguar)
Bookmark and Share Feedback Print
 
PTI
ಲಕ್ಮೋ ಮೂಲದ ಸುಬ್ರತೋ ರಾಯ್ ಮಾಲೀಕತ್ವದ ಸಹಾರಾ ಇಂಡಿಯಾ, ಮೊದಲ ಬಾರಿಗೆ ಸಾಗರೋತ್ತರ ಹೋಟೆಲ್ ಖರೀದಿಸಲು ಮುಂದಾಗಿದೆ.

ಸಹಾರಾ ಇಂಡಿಯಾ, ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲೆಂಡ್ ಮಾಲೀಕತ್ವದ ಇಂಗ್ಲೆಂಡ್‌ನ 'ಗ್ರೊಸ್‌ವೆನೊರ್ ಹೌಸ್ ಹೋಟೆಲ್' ಖರೀದಿಗೆ 470 ಮಿಲಿಯನ್ ಪೌಂಡ್‌(3,275 ಕೋಟಿ ರೂ.)ಗಳನ್ನು ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಕಂಪೆನಿಗಳ ಶಾಪಿಂಗ್‌ಗಳಿಗೆ ಇಂಗ್ಲೆಂಡ್ ಪ್ರಶಸ್ತ ಸ್ಥಳವಾಗಿದೆ. ಟೀ ವಿಭಾಗದಲ್ಲಿ ಟೆಟ್ಲಿ ಮತ್ತು ಟೈಫೂ, ಕಾಸ್ಮಟಿಕ್ಸ್‌ನಲ್ಲಿ ಕ್ಯೂಟಿಕುರಾ, ಎರಾಸ್‌ಮಿಕ್ ಮತ್ತು ನ್ಯೂಲಾನ್ ಮತ್ತು ವಾಹನೋದ್ಯಮ ಕ್ಷೇತ್ರದಲ್ಲಿ ಜಾಗ್ವಾರ್ ಮತ್ತು ಲಾಂಡ್ ರೋವರ್ ಕಂಪೆನಿಗಳನ್ನು ಭಾರತೀಯ ಕಂಪೆನಿಗಳು ಖರೀದಿಸಿವೆ.

ಒಂದೊಮ್ಮೆ ಡ್ಯೂಕ್ ವೆಸ್ಟ್‌ಮಿನಿಸ್ಟರ್ ವಾಸವಾಗಿದ್ದ ಲಂಡನ್‌ನ ಪಾರ್ಕ್ಸ್ ಲೇನ್‌ನಲ್ಲಿರುವ 'ಗ್ರೊಸ್‌ವೆನೊರ್ ಹೌಸ್ ಹೋಟೆಲ್' 494 ಐಷಾರಾಮಿ ಕೋಣೆಗಳ ಹೋಟೆಲ್‌ ಖರೀದಿಸಿದ ಸಹಾರಾ, ಇಂಗ್ಲೆಂಡ್‌ನಲ್ಲಿ ಎರಡನೇ ಹೋಟೆಲ್ ಖರೀದಿಸಿದಂತಾಗಿದೆ.

ಸಹಾರಾ ಗ್ರೂಪ್ ವಹಿವಾಟು ವಿಸ್ತರಣೆಗೆ ಆದ್ಯತೆಯನ್ನು ನೀಡುವುದಾಗಿದೆ. ಮುಂಬರುವ ವರ್ಷಗಳಲ್ಲಿ ಲಂಡನ್‌ನಲ್ಲಿ ವಹಿವಾಟು ವಿಸ್ತರಣೆಗೆ ಆರಂಭವಾದಂತಾಗಿದೆ ಎಂದು ಸಹಾರಾ ಗ್ರೂಪ್ ಮುಖ್ಯಸ್ಥರಾದ ಸುಬ್ರತಾ ರಾಯ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ