ನೀರಿನಲ್ಲಿ ಓಡುವ ಕಾರುಗಳ ತಯಾರಿಕೆ ಅಂಗವಾಗಿ ಸಂಶೋಧನೆ ನಡೆಸಲು ,ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ 15 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ ಎಂದು ಟಾಟಾ ಮೂಲಗಳು ತಿಳಿಸಿವೆ.
ರತನ್ ಟಾಟಾ, ಅಮೆರಿಕದ ಮಸ್ಸೆಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಪ್ರೊಫೆಸರ್‌ಗೆ ನೀರಿನಲ್ಲಿ ಓಡುವ ಕಾರುಗಳ ತಯಾರಿಕೆಗೆ ಅಗತ್ಯವಾದ ಸಂಶೋಧನೆಗಾಗಿ 15 ಮಿಲಿಯನ್ ಡಾಲರ್ ನೀಡಿದ್ದಾರೆ. ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಸಮಿತಿಯ ಮುಖ್ಯಸ್ಥರಾದ ಸಿ.ಎನ್.ಆರ್.ರಾವ್ ಹೇಳಿದ್ದಾರೆ.
ನೀರಿನಲ್ಲಿ ವೇಗವಾಗಿ ಓಡುವ ಕಾರುಗಳನ್ನು ತಯಾರಿಸಬೇಕು ಎನ್ನುವುದು ರತನ್ ಟಾಟಾ ಕನಸಾಗಿದೆ.ನನ್ನ ಕನಸು ಕೂಡಾ ಅದೇ ಆಗಿದೆ ಎಂದು ರಾವ್ ತಿಳಿಸಿದ್ದಾರೆ.