ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಫ್‌ಎಸ್‌ಡಿಸಿಯ ಪ್ರಥಮ ಸಭೆಗೆ ಪ್ರಣಬ್ ಮುಖರ್ಜಿ ನೇತೃತ್ವ (FSDC | Pranab Mukherjee | Inter-regulatory issues)
Bookmark and Share Feedback Print
 
ಅಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ರಚಿಸಲಾದ ಉನ್ನತ ಮಟ್ಟದ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯ ನೇತೃತ್ವವನ್ನು, ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ವಹಿಸಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್, ವಿತ್ತ ಕಾರ್ಯದರ್ಶಿ, ಸೆಬಿ ಮುಖ್ಯಸ್ಥರು ಮತ್ತು ಐಆರ್‌ಡಿಎ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದು, ರಚನಾತ್ಮಕ ಚರ್ಚೆಗಳಾಗಿವೆ ಎಂದು ಸಚಿವ ಮುಖರ್ಜಿ ತಿಳಿಸಿದ್ದಾರೆ.

ದೇಶದ ಆರ್ಥಿಕತೆ ಸೇರಿದಂತೆ ಇತರ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಕೇಂದ್ರ ಸಚಿವಾಲಯದ ವಿತ್ತ ಖಾತೆ ಕಾರ್ಯದರ್ಶಿಗಳಾದ ಅಶೋಕ್ ಚಾವ್ಲಾ ಹೇಳಿದ್ದಾರೆ.

ಸಭೆಯಲ್ಲಿ ಆರ್‌ಬಿಐನ ಡಿ.ಸುಬ್ಬಾರಾವ್, ಸೆಬಿ ಮುಖ್ಯಸ್ಥ ಸಿ.ಬಿ.ಭಾವೆ,ಐಆರ್‌ಡಿಎ ಜೆ.ಹರಿ ನಾರಾಯಣ್ ಉಪಸ್ಥಿತರಿದ್ದರು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ