ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ದರದಿಂದ ಠೇವಣಿ ಸಂಗ್ರಹದಲ್ಲಿ ಕುಸಿತ:ಆರ್‌ಬಿಐ (Deposits | High inflation | Quarter | Reserve Bank)
Bookmark and Share Feedback Print
 
ಆರಂಭಿಕ ತ್ರೈಮಾಸಿಕ ಅವಧಿಯಲ್ಲಿ ಭಾರತೀಯ ಬ್ಯಾಂಕ್‌ಗಳ ಠೇವಣಿಗಳಲ್ಲಿ ಶೇ.14.5ರಷ್ಟು ಹೆಚ್ಚಳವಾಗಿದೆ.ಸರಕಾರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.20ರಷ್ಟು ಠೇವಣಿಯನ್ನು ಸಂಗ್ರಹಿಸುವ ಗುರಿಯನ್ನು ನೀಡಿತ್ತು.

ಆದರೆ, ಹಣದುಬ್ಬರ ದರದ ಕಾರಣಗಳಿಂದಾಗಿ ಠೇವಣಿ ಬಡ್ಡಿ ದರದಲ್ಲಿ ಕುಸಿತವಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಠೇವಣಿಗಳಲ್ಲಿ ಶೇ.21.1ರಷ್ಟು ಹೆಚ್ಚಳವಾಗಿತ್ತು ಎಂದು ಬ್ಯಾಂಕಿಂಗ್ ಕ್ಷೇತ್ರದ ಮೂಲಗಳು ಬಹಿರಂಗಪಡಿಸಿವೆ.

ಏತನ್ಮಧ್ಯೆ, ಸಾಲ ನೀಡಿಕೆಯಲ್ಲಿ ಕಳೆದ ವರ್ಷ ಶೇ.14.3ರಷ್ಟು ಚೇತರಿಕೆ ಕಂಡಿತ್ತು. ಆದರೆ. ಪ್ರಸಕ್ತ ವರ್ಷದ ಆರಂಭಿಕ ತ್ರೈಮಾಸಿಕ ಅವಧಿಯಲ್ಲಿ ಶೇ.20.4ಕ್ಕೆ ಏರಿಕೆಯಾಗಿದೆ.

ಭಾರತೀಯ ಬ್ಯಾಂಕ್‌ಗಳ ಒಟ್ಟು ಠೇವಣಿ ದರ 45,40,130 ಕೋಟಿ ರೂಪಾಯಿಗಳಿಗೆ ತಲುಪಿದೆ. 33,56,757 ಕೋಟಿ ರೂಪಾಯಿಗಳ ಸಾಲವನ್ನು ನೀಡಲಾಗಿದೆ.

ಪ್ರಸಕ್ತ ವರ್ಷದ ಅವಧಿಯಲ್ಲಿ ಹಣದುಬ್ಬರ ದರ ನಿರಂತರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ಠೇವಣಿಗಳಲ್ಲಿ ಇಳಿಮುಖವಾಗಿದೆ ಎಂದು ಬ್ಯಾಂಕಿಂಗ್ ಉನ್ನತ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ