ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಿಹಿ ಸುದ್ದಿ....ಸಾರ್ವತ್ರಿಕ ಮೊಬೈಲ್ ರೀಚಾರ್ಜರ್ ಬರಲಿದೆ! (Mobile | London | USB Connector)
Bookmark and Share Feedback Print
 
ಜಗತ್ತಿನಾದ್ಯಂತ ಮೊಬೈಲ್ ಮೇನಿಯಾ ಹೆಚ್ಚುತ್ತಿರುವ ನಡುವೆಯೇ ರೀಚಾರ್ಜ್ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಆದರೆ ಇದೀಗ ಸಿಹಿ ಸುದ್ದಿಯೊಂದು ಬಂದಿದೆ. 2011ರಲ್ಲಿ ಮೊಬೈಲ್ ರೀಚಾರ್ಜ್ ಮಾಡಲು ಯಾವುದೇ ಕಂಪನಿಯ ರೀಚಾರ್ಜ್‌ನ್ನು ಬೇಕಾದರು ಬಳಸಬಹುದಂತೆ.

ಇದು ಸತ್ಯ...2011ರಲ್ಲಿ ಎಲ್ಲ ಕಂಪನಿಯ ಮೊಬೈಲ್‌ಗಳಿಗೂ ಅನ್ವಯವಾಗಬಲ್ಲ ರೀಚಾರ್ಜರ್ ಮಾರುಕಟ್ಟೆಗೆ ಬರಲಿದೆ. ವಿಶ್ವದ 14 ಪ್ರಮುಖ ಮೊಬೈಲ್ ಉತ್ಪಾದಕರು ಐರೋಪ್ಯ ಆಯೋಗದ ಹೊಸ ಸ್ಟ್ಯಾಂಡರ್ಡ್ ಪ್ರಕಾರ ಸಾರ್ವತ್ರಿಕ ಮೊಬೈಲ್ ರೀಚಾರ್ಜರಗೆ ಸಮ್ಮತಿಸಿದೆ.

ತಾಂತ್ರಿಕವಾಗಿ ಮೈಕ್ರೊ ಯುಎಸ್‌ಬಿ ಕನೆಕ್ಟರ್ ಅನ್ನು ಅಳವಡಿಸುವುದರ ಮೂಲಕ ಇದು ಸಾಧ್ಯವಾಗಲಿದೆ. ಸ್ಯಾಮ್‌ಸಂಗ್, ಆಪಲ್, ನೋಕಿಯಾ, ಬ್ಲ್ಯಾಕ್‌ಬೆರಿ ಉತ್ಪಾದಕ ರೀಸರ್ಚ್ ಇನ್ ಮೋಶನ್ ಮುಂತಾದ ಕಂಪನಿಗಳು ಈಗಾಗಲೇ ಯುಎಸ್‌ಬಿ ಕನೆಕ್ಟರ್ ಅಳವಡಿಕೆಗೆ ಒಪ್ಪಿವೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಇದರಿಂದ ಗ್ರಾಹಕರಿಗೆ ಹಾಗೂ ಕಂಪನಿಗಳಿಗೆ ಲಾಭವಾಗಲಿದೆ. ಅನಗತ್ಯ ವೆಚ್ಚ ಇಳಿಕೆಯಾಗಲಿದೆ. ಸಾರ್ವತ್ರಿಕೆ ಮೊಬೈಲ್ ರೀಚಾರ್ಜರ್‌ ಬಿಡುಗಡೆಯಿಂದ ಎಲ್ಲಾ ಬಳಕೆದಾರರಿಗೆ ಅನುಕೂಲವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ