ನೂತನ ಟೆಲಿಕಾಂ ಸಚಿವರಾಗಿ ಆಧಿಕಾರ ವಹಿಸಿಕೊಂಡ ಕೇಂದ್ರ ಸಚಿವ ಕಪಿಲ್ ಸಿಬಲ್, ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
2011ರಲ್ಲಿ ಭ್ರಷ್ಟಾಚಾರ ಮುಕ್ತ ಸಚಿವಾಲಯವಾಗಬೇಕು ಎಂಬ ಆಶಯದೊಂದಿಗೆ 100 ದಿನಗಳ ಅಜೆಂಡಾವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮೊದಲನೇ ಅಂಶವೇ ಟೆಲಿಕಾಂ ನೀತಿಯಾಗಿದೆ ಎಂದು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ಗ್ರಾಮೀಣ ಭಾಗದ ಜನರ ಆರ್ಥಿಕ ವಹಿವಾಟಿಗಾಗಿ ಯೋಜನೆಯೊಂದನ್ನು ರೂಪಿಸಲಾಗಿದ್ದು, ಕ್ರೆಡಿಟ್ ಕಾರ್ಡ್ ಮಾದರಿಯಲ್ಲೇ ವೈಟ್ ಲೆಬೆಲ್ ಪ್ರಿಪೇಯ್ಡ್ ಕಾರ್ಡ್ ನೀಡಿದರೆ ಹೇಗೆ ಎನ್ನುವ ಕುರಿತಂತೆ ಬ್ಯಾಂಕ್‌ಗಳೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಐಡಿಬಿಐ, ಎಚ್‌ಎಸ್‌ಬಿಸಿ ಹಾಗೂ ಐಸಿಐಸಿಐ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆದಿದೆ. ಆದರೆ,ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಗಾಗಿ ನಿರೀಕ್ಷಿಸಲಾಗುತ್ತದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.