ದೇಶದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ, ಪ್ರಸಕ್ತ ವರ್ಷ ಈರುಳ್ಳಿ ಉತ್ಪನ್ನದಲ್ಲಿ ಶೇ.12.5ರಷ್ಟು ಕುಸಿತವಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಕೃಷಿ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷದ ಅವಧಿಯಲ್ಲಿ ದೇಶದ ಈರುಳ್ಳಿ ಉತ್ಪನ್ನ 12 ಮಿಲಿಯನ್ ಟನ್‌ಗಳಿಗೆ ತಲುಪಿತ್ತು. ಪ್ರಸಕ್ತ ವರ್ಷದ ಅವಧಿಯಲ್ಲಿ ಈರುಳ್ಳಿ ಉತ್ಪನ್ನ 10.5 ಮಿಲಿಯನ್ ಟನ್‌ಗಳಿಗೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಎನ್‌ಎಚ್‌ಆರ್‌ಡಿಎಫ್‌ನ ಹೆಚ್ಚುವರಿ ನಿರ್ದೇಶಕ ಸತೀಶ್ ಭೊಂಡೆ ಆತಂಕ ವ್ಯಕ್ತಪಡಿಸಿದ್ದಾರೆ.
ಖಾರೀಫ್ ಸೀಜನ್ ಸಮಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ,ದೇಶದ ಒಟ್ಟು ಈರುಳ್ಳಿ ಉತ್ಪನ್ನದಲ್ಲಿ 1.5 ಮಿಲಿಯನ್ ಟನ್‌ಗಳಷ್ಟು ಕುಸಿತವಾಗಲಿದ್ದು, 10.5 ಮಿಲಿಯನ್ ಟನ್‌ಗಳಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈರುಳ್ಳಿ ಉತ್ಪನ್ನದಲ್ಲಿ ಕುಸಿತವಾಗುವ ಸಾಧ್ಯತೆಗಳಿವೆ. ಜನವೆರಿ ಮಧ್ಯಭಾಗದಿಂದ ಈರುಳ್ಳಿ ಮಾರುಕಟ್ಟೆಗೆ ಬರಲಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.
ದೇಶದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾಗಿದ್ದು, ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.50 ರಷ್ಟನ್ನು ಪಾಲನ್ನು ಉಭಯ ರಾಜ್ಯಗಳು ಹೊಂದಿವೆ.