ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜನೆವರಿ ಮಧ್ಯಭಾಗದಲ್ಲಿ ಈರುಳ್ಳಿ ದರ ಕುಸಿತ:ವರ್ತಕರು (Onion prices | Traders | Azadpur Mandi | Delhi)
Bookmark and Share Feedback Print
 
ಗಗನಕ್ಕೇರುತ್ತಿರುವ ಈರುಳ್ಳಿ ದರಗಳು ಜನನೆವರಿ ಮಧ್ಯಭಾಗದಲ್ಲಿ ಇಳಿಕೆಯಾಗುವ ನಿರೀಕ್ಷೆಗಳಿವೆ ಎಂದು ದೆಹಲಿ ಸಗಟು ಮಾರುಕಟ್ಟೆಯ ವರ್ತಕರು ಹೇಳಿದ್ದಾರೆ.

ಜನೆವರಿ 20 ರ ನಂತರ ಈರುಳ್ಳಿ ದರದಲ್ಲಿ ಇಳಿಕೆಯಾಗಲಿವೆ ಎಂದು ಏಷ್ಯಾದ ಬೃಹತ್ ಸಗಟು ತರಕಾರಿ ಮಾರುಕಟ್ಟೆಯಾದ ಅಜಾದ್‌ಪುರ್ ಮಾರುಕಟ್ಟೆಯ ವರ್ತಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಬೆಳೆಯಲಾದ ಈರುಳ್ಳಿ, ಜನೆವರಿ 15-20ರವರೆಗೆ ಮಾರುಕಟ್ಟೆಗಳಿಗೆ ಆಗಮಿಸುವ ಹಿನ್ನೆಲೆಯಲ್ಲಿ ದರದಲ್ಲಿ ಇಳಿಕೆಯಾಗಲಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಡಿಸೆಂಬರ್ ತಿಂಗಳ ಕೊನೆಯ ವಾರದ ಅವಧಿಯಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 80 ರೂಪಾಯಿಗಳಿಂದ 100 ರೂಪಾಯಿಗಳಿಗೆ ಏರಿಕೆ ಕಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ