ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರತಿ ಟನ್ ಉಕ್ಕು ದರದಲ್ಲಿ 1000 ರೂ. ಏರಿಕೆ ಘೋಷಣೆ (SAIL | Steel prices | Hikes)
Bookmark and Share Feedback Print
 
ಉಕ್ಕು ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪ್ರತಿ ಟನ್‌ಗೆ 1000 ರೂಪಾಯಿಗಳಂತೆ ದರ ಏರಿಕೆ ಘೋಷಿಸಲಾಗಿದೆ ಎಂದು ದೇಶದ ಉಕ್ಕು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಸೇಲ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸೇಲ್ ಸಂಸ್ಥೆಯ ಎಲ್ಲಾ ಉತ್ಪನ್ನಗಳ ದರಗಳಲ್ಲಿ ಶೇ.3 ರಷ್ಟು ಏರಿಕೆ ಮಾಡಲಾಗಿದೆ ಅಥವಾ ಪ್ರತಿ ಟನ್‌ಗೆ 1000 ರೂಪಾಯಿಗಳಷ್ಟು ದರ ಏರಿಕೆ ಮಾಡಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ

ಉಕ್ಕು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ದರ ಏರಿಕೆ ಘೋಷಿಸಲಾಗಿದೆ. ತಕ್ಷಣದಿಂದಲೇ ದರ ಏರಿಕೆ ಜಾರಿಗೆ ಬರಲಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೇಲ್ ಉಕ್ಕು ದರ, ದರ ಏರಿಕೆ