ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಂದಿನ ತ್ರೈಮಾಸಿಕಕ್ಕೆ ಡೀಸೆಲ್ ದರ ಏರಿಕೆ:ರಂಗರಾಜನ್ (Diesel price | Hike | Deferred | Inflation)
Bookmark and Share Feedback Print
 
ಹಣದುಬ್ಬರ ದರ ಏರಿಕೆಯ ಹಿನ್ನೆಲೆಯಲ್ಲಿ ಡೀಸೆಲ್ ದರ ಏರಿಕೆಯನ್ನು, ಮುಂದಿನ ತ್ರೈಮಾಸಿಕ ಅವಧಿಗೆ ಮುಂದೂಡುವ ಸಾಧ್ಯತೆಗಳಿವೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.

ಮಾರ್ಚ್ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.6ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿರುವುದರಿಂದ, ಮಾರ್ಚ್ ತಿಂಗಳಲ್ಲಿ ಡೀಸೆಲ್ ದರ ಏರಿಕೆ ಘೋಷಣೆಗೆ ಸರಕಾರ ನಿರ್ಧರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ನಡೆದ ಅಧಿಕಾರಯುತ ಸಚಿವರ ಸಮಿತಿ, ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳಗೊಳಿಸುವ ಕುರಿತಂತೆ ಚರ್ಚಿಸಲಾಗಿತ್ತು. ಆದರೆ, ಇದೀಗ ಸಭೆ ಅನಿರ್ಧಿಷ್ಠಾವಧಿಯವರೆಗೆ ಮುಂದೂಡಲಾಗಿದೆ.

ಪ್ರಸ್ತುತ, ಪ್ರತಿ ಲೀಟರ್‌ ಡೀಸೆಲ್‌ ಮಾರಾಟದಿಂದ 6.99 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿವೆ. ಡೀಸೆಲ್‌ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದಲ್ಲಿ, ನಷ್ಟವನ್ನು ಕಡಿಮೆ ಮಾಡಬಹುದಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಹೇಳಿಕೆ ನೀಡಿವೆ.
ಸಂಬಂಧಿತ ಮಾಹಿತಿ ಹುಡುಕಿ