ಮದುವೆ ಸೀಜನ್‌ನಿಂದಾಗಿ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ಚಿನ್ನದ ದರ ಪ್ರತಿ 10 ಗ್ರಾಂಗೆ 21,000 ರೂಪಾಯಿಗಳಿಗೆ ಏರಿಕೆ ಕಂಡಿದೆ ಏತನ್ಮಧ್ಯೆ,ಬೆಳ್ಳಿಯ ದರದಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಚಿನ್ನದ ದರ ಇಂದಿನ ಆರಂಭಿಕ ವಹಿವಾಟಿನಲ್ಲಿ ಪ್ರತಿ 10ಗ್ರಾಂಗೆ 20 ರೂಪಾಯಿಗಳ ಏರಿಕೆ ಕಂಡು 21,000 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 90 ರೂಪಾಯಿಗಳಷ್ಟು ಏರಿಕೆಯಾಗಿ 46,840 ರೂಪಾಯಿಗಳಿಗೆ ತಲುಪಿದೆ.
ಏತನ್ಮಧ್ಯೆ, ಬೆಳ್ಳಿ ನಾಣ್ಯಗಳ(100 ನಾಣ್ಯಗಳು) ದರದಲ್ಲಿ 500 ರೂಪಾಯಿಗಳಷ್ಟು ಏರಿಕೆಯಾಗಿ 51,000 ರೂಪಾಯಿಗಳಿಗೆ ತಲುಪಿದೆ.
ಬೆಳ್ಳಿಯ ನಾಣ್ಯಗಳನ್ನು ಸಾಮಾನ್ಯವಾಗಿ ಮದುವೆ ಸಮಾರಂಭದಲ್ಲಿ ಉಡುಗೊರೆಯಾಗಿ ನೀಡಲಾಗುತ್ತದೆ.