ಮುಂಬರುವ ಐದು ವರ್ಷಗಳ ಅವಧಿಯಲ್ಲಿ, ಮೋಟಾರ್‌ಸೈಕಲ್ ವಾಹನಗಳ ಮಾರಾಟವನ್ನು ಮೂರುಪಟ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಹೋಂಡಾ ಸಂಸ್ಥೆ, ಕಳೆದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಹೀರೋ ಹೋಂಡಾ ಮೋಟಾರ್ಸ್ ಲಿಮಿಟೆಡ್‌ನ ಹೀರೋ ಗ್ರೂಪ್ ಜಂಟಿ ಸಹಭಾಗಿತ್ವದ ಶೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿತ್ತು.
ಹೋಂಡಾ ಸಂಸ್ಥೆ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪ್ರಸ್ತುತ ವಾರ್ಷಿಕವಾಗಿ 1.55 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಮುಂಬರುವ ಐದು ವರ್ಷಗಳ ಅವಧಿಯಲ್ಲಿ ವಾಹನಗಳ ಮಾರಾಟ ಮೂರು ಪಟ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
ರಾಜಸ್ಥಾನದಲ್ಲಿ ಎರಡನೇ ಘಟಕ ಆರಂಭವಾಗಿದ್ದು, ವಾರ್ಷಿಕವಾಗಿ 2.2 ಮಿಲಿಯನ್ ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ 2012ರ ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಮತ್ತೊಂದು ಘಟಕವನ್ನು ಸ್ಥಾಪಿಸಲು ಕಂಪೆನಿಯ ಅಡಳಿತ ಮಂಡಳಿ ಯೋಜನೆಗಳನ್ನು ರೂಪಿಸಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.