ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದರ ಏರಿಕೆ: ವಿಮಾನ ನಿಲ್ದಾಣದಲ್ಲಿ ಕೊಳೆಯಿತ್ತಿರುವ ಈರುಳ್ಳಿ (Onion prices | Mumbai port | Wholesale market)
Bookmark and Share Feedback Print
 
PTI
ಗಗನಕ್ಕೇರಿದ ಈರುಳ್ಳಿ ದರ ಜನಸಾಮಾನ್ಯರಿಗೆ ಕಣ್ಣೀರು ತರಿಸುತ್ತಿದೆ.ದೇಶದ ಅಡಳಿತ ವ್ಯವಸ್ಥೆಯ ಲೋಪದೋಷಗಳಿಂದ ಜನಸಾಮಾನ್ಯರ ಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗಿದೆ.

ಈರುಳ್ಳಿ ದರ ಏರಿಕೆಯ ಮಧ್ಯೆಯು, ಪಾಕಿಸ್ತಾನದಿಂದ ಅಮದು ಮಾಡಿಕೊಂಡ 200 ಟನ್ ಈರುಳ್ಳಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕೊಳೆಯುತ್ತಿದೆ.

ದೆಹಲಿಯಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 50ರಿಂದ 60 ರೂಪಾಯಿಗಳಿಗೆ ಏರಿಕೆಯಾಗಿದೆ. ಮೆಟ್ರೋ ನಗರಗಳಲ್ಲಿ ಪ್ರತಿ ಕೆಜಿ ಈರುಳ್ಳಿಗೆ 40- 65 ರೂಪಾಯಿಗಳಿಗೆ ತಲುಪಿದೆ.

ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ ರಾಜ್ಯಗಳಿಂದ ಮುಂದಿನ 15 ದಿನಗಳ ಅವಧಿಯಲ್ಲಿ ಈರುಳ್ಳಿ ಬೆಳೆ ಮಾರುಕಟ್ಟೆಗೆ ಆಗಮಿಸಿದ ನಂತರ ದರಗಳಲ್ಲಿ ಕುಸಿತವಾಗಬಹುದು ಎಂದು ವರ್ತಕರು ನಿರೀಕ್ಷಿಸಿದ್ದಾರೆ.

ಏತನ್ಮಧ್ಯೆ, ಕಳೆದ ಐದು ದಿನಗಳ ಹಿಂದೆ ಪಾಕಿಸ್ತಾನದಿಂದ ಅಮದು ಮಾಡಿಕೊಂಡ 200 ಟನ್ ಈರುಳ್ಳಿ ಜವಾಹರಲಾಲ್ ನೆಹರು ವಿಮಾನ ನಿಲ್ದಾಣದಲ್ಲಿ ಕೊಳೆಯುತ್ತಿದೆ.ಸಗಟು ಮಾರುಕಟ್ಟೆಗೆ ಸಾಗಿಸುವ ಮುನ್ನ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಅನುಮತಿ ಪಡೆಯಲು ನಿರೀಕ್ಷಿಸಲಾಗುತ್ತಿದೆ.

ರಾಜ್ಯ ಸರಕಾರ, ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದರಿಂದ, ಈರುಳ್ಳಿಯನ್ನು ನಿಲ್ದಾಣದಿಂದ ಹೊರತರಲು ವಿಳಂಬವಾಗುತ್ತಿದೆ. ಮತ್ತಷ್ಟು ವಿಳಂಬವಾದಲ್ಲಿ ಈರುಳ್ಳಿ ಕೊಳೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ