ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಲೆಲ್ಯಾಂಡ್ ವಾಹನಗಳ ಮಾರಾಟದಲ್ಲಿ ಶೇ.24ರಷ್ಟು ಹೆಚ್ಚಳ (Ashok Leyland | Hinduja Group | Sales jump)
Bookmark and Share Feedback Print
 
ವಾಣಿಜ್ಯ ವಾಹನಗಳ ಮಾರಾಟ ಡಿಸೆಂಬರ್ ತಿಂಗಳ ಅವಧಿಯಲ್ಲಿ ಶೇ.23.86 ರಷ್ಟು ಏರಿಕೆಯಾಗಿದೆ ಎಂದು ಹಿಂದೂಜಾ ಗ್ರೂಪ್‌ನ ಅಶೋಕ್ ಲೆಲ್ಯಾಂಡ್ ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.23.86ರಷ್ಟು ಹೆಚ್ಚಳವಾಗಿ 7,568 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

2009ರ ಅವಧಿಯಲ್ಲಿ 6,110 ವಾಣಿಜ್ಯ ವಾಹನಗಳ ಮಾರಾಟ ಮಾಡಲಾಗಿತ್ತು ಎಂದು ಅಶೋಕ್ ಲೆಲ್ಯಾಂಡ್ ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ಡಿಸೆಂಬರ್ ತಿಂಗಳ ಅವಧಿಯಲ್ಲಿ ದೇಶಿಯ ವಾಹನಗಳ ಮಾರಾಟದಲ್ಲಿ ಶೇ.15.87 ರಷ್ಟು ಏರಿಕೆಯಾಗಿದ್ದು, 6,411 ವಾಹನಗಳನ್ನು ಮಾರಾಟ ಮಾಡಲಾಗಿದೆ. 2009ರ ಡಿಸೆಂಬರ್ ಅವಧಿಯಲ್ಲಿ 5,533 ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ವಾಣಿಜ್ಯ ವಾಹನಗಳ ರಫ್ತು ವಹಿವಾಟಿನಲ್ಲಿ ಕೂಾ ದ್ವಿಗುಣವಾಗಿದ್ದು, 1,157 ವಾಹನಗಳನ್ನು ರಫ್ತು ಮಾಡಲಾಗಿದೆ. 2009ರ ಅವಧಿಯಲ್ಲಿ 577 ವಾಹನಗಳನ್ನು ರಫ್ತು ಮಾಡಲಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ದೇಶಿಯವಾಗಿ ಒಟ್ಟು ವಾಹನಗಳ ಮಾರಾಟದಲ್ಲಿ ಶೇ.16.89ರಷ್ಟು ಏರಿಕೆಯಾಗಿದ್ದು 6,354 ವಾಹನಗಳನ್ನು ಮಾರಾಟ ಮಾಡಲಾಗಿದೆ. 2009ರ ಡಿಸೆಂಬರ್ ತಿಂಗಳ ಅವಧಿಯಲ್ಲಿ 5,436 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ