ಭಾರತಕ್ಕೆ ಈರುಳ್ಳಿಯನ್ನು ಅಮದು ಮಾಡುತ್ತಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಈರುಳ್ಳಿ ದರ ಏರಿಕೆಯಾಗುತ್ತಿರುವುದರಿಂದ ರಸ್ತೆ ಮತ್ತು ರೈಲುಗಳ ಮೂಲಕ ರಫ್ತಿಗೆ ನಿಷೇಧ ಹೇರಿ ಸರಕಾರ ಆದೇಶ ಹೊರಡಿಸಿದೆ.
ಏತನ್ಮಧ್ಯೆ, ಸಮುದ್ರದ ಮೂಲಕ ಈರುಳ್ಳಿ ರಫ್ತಿಗೆ ಅನುಮತಿ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಆಹಾರ ಮತ್ತು ಕೃಷಿ ಸಚಿವಾಲಯ ಜನೆವರಿ 4 ರಂದು ಅಧಿಸೂಚನೆ ಹೊರಡಿಸಿ, ಭಾರತಕ್ಕೆ ರಸ್ತೆಯ ಮೂಲಕ ಈರುಳ್ಳಿ ರಫ್ತಿನಿಂದಾಗಿ, ದೇಶದಲ್ಲಿ ಈರುಳ್ಳಿ ದರದಲ್ಲಿ ಏರಿಕೆಯಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ತಿಂಗಳಿನಿಂದ ದೇಶದ ಅಮೃತಸರದ ಅಟ್ಟಾರಿ-ವಾಘಾ ಗಡಿ ಮಾರ್ಗವಾಗಿ ಪಾಕಿಸ್ತಾನದಿಂದ 620 ಟ್ರಕ್‌ಗಳಷ್ಟು ಈರುಳ್ಳಿಯನ್ನು ಅಮದು ಮಾಡಿಕೊಳ್ಳಲಾಗಿದೆ
ದೇಶದ ನಾಲ್ಕು ಮೆಟ್ರೋ ಮಹಾನಗರಗಳಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 55-60 ರೂಪಾಯಿಗಳಿಗೆ ಏರಿಕೆಯಾಗಿದೆ. ಕಳೆದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 70-85 ರೂಪಾಯಿಗಳಿಗೆ ಏರಿಕೆಯಾಗಿತ್ತು.
ದೇಶದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ. ದೇಶದ ಒಟ್ಟು ಈರುಳ್ಳಿ ಉತ್ಪಾದನೆಯಲ್ಲಿ ಶೇ.40ರಷ್ಟು ಪಾಲನ್ನು ಹೊಂದಿದ್ದು, 12 ಮಿಲಿಯನ್ ಟನ್ ಈರುಳ್ಳಿಯನ್ನು ಉತ್ಪಾದಿಸುತ್ತಿವೆ.