ಎಟಿಎಂ ಪ್ರತಿಯೊಂದು ವಹಿವಾಟಿಗೆ 'ಪಿನ್' ಸಂಖ್ಯೆ ದಾಖಲು ಅಗತ್ಯ
ನವದೆಹಲಿ, ಗುರುವಾರ, 6 ಜನವರಿ 2011( 13:22 IST )
ಮುಂದಿನ ದಿನಗಳಲ್ಲಿ ಎಟಿಎಂನಲ್ಲಿ ನೀವು ಬಯಸುವ ಪ್ರತಿಯೊಂದು ವಹಿವಾಟಿಗೆ, ಪ್ರತಿ ಬಾರಿ 'ಪಿನ್'ಸಂಖ್ಯೆಯನ್ನು ದಾಖಲಿಸುವುದು ಅನಿವಾರ್ಯವಾಗಲಿದೆ.
ಎಟಿಎಂನಿಂದ ಹಣ ತೆಗೆಯುವುದು, ಖಾತೆಯಲ್ಲಿರುವ ಹಣದ ವಿವರ, ಬ್ಯಾಲೆನ್ಸ್ ಮೊತ್ತ ಸೇರಿದಂತೆ ಪ್ರತಿಯೊಂದು ವ್ಯವಹಾರಗಳಿಗೆ ಪ್ರತಿ ಬಾರಿ 'ಪಿನ್' ಸಂಖ್ಯೆಯನ್ನು ದಾಖಲಿಸುವುದು ಅಗತ್ಯವಾಗಿದೆ.
ಅನಧಿಕೃತ ವ್ಯಕ್ತಿಗಳಿಂದ ಎಟಿಎಂ ಕಾರ್ಡ್‌ಗಳ ಬಳಕೆಯಲ್ಲಿ ದುರುಪಯೋಗವಾಗುತ್ತಿರುವುದನ್ನು ತಡೆಯಲು ಆರ್‌ಬಿಐ, ಎಟಿಎಂ ಪ್ರತಿಯೊಂದು ವ್ಯವಹಾರಕ್ಕೆ ಪ್ರತಿ ಬಾರಿ ಪಿನ್ ಸಂಖ್ಯೆಯನ್ನು ದಾಖಲಿಸಲು ಅವಕಾಶ ನೀಡುವಂತೆ ಬ್ಯಾಂಕ್‌ಗಳಿಗೆ ತಲಹೆ ನೀಡಿದೆ.
ಪ್ರಸ್ತುತ ಬ್ಯಾಂಕ್ ಗ್ರಾಹಕರು ಹಣ ವರ್ಗಾವಣೆ, ಹಣ ಹಿಂತೆಗೆಯಲು, ಬಿಲ್ ಪಾವತಿ ಮತ್ತು ಖಾತೆ ಪರಿಶೀಲನೆ ಸೇರಿದಂತೆ ಇತರ ವಹಿವಾಟುಗಳಿಗಾಗಿ ಒಂದೇ ಬಾರಿ 'ಪಿನ್'ಸಂಖ್ಯೆಯನ್ನು ದಾಖಲಿಸುತ್ತಿದ್ದರು. ನೂತನ ನಿಯಮ ಜಾರಿಗೆ ಬಂದಲ್ಲಿ ಗ್ರಾಹಕರು, ತಮ್ಮ ಪ್ರತಿಯೊಂದು ವಹಿವಾಟಿಗೆ ಪ್ರತಿ ಬಾರಿ ಪಿನ್ ಸಂಖ್ಯೆಯನ್ನು ದಾಖಲಿಸುವುದು ಅನಿವಾರ್ಯವಾಗುತ್ತದೆ.
ಕೆಲುವು ಬಾರಿ ಗ್ರಾಹಕರು ಎಟಿಎಂ ಮಷಿನ್‌ನಲ್ಲಿ ಎಟಿಎಂ ಕಾರ್ಡ್ ಮರೆತುಹೋದ ಸಂದರ್ಭದಲ್ಲಿ, ಅನಧಿಕೃತ ವ್ಯಕ್ತಿಗಳು ಎಟಿಎಂ ಕಾರ್ಡ್ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.