ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಿಟಿಬ್ಯಾಂಕ್ ವಂಚನೆ: ಶಿವರಾಜ್ ಪುರಿ ಬಂಧನ ಅವಧಿ ವಿಸ್ತರಣೆ (Citibank fraud | Shivraj Puri | Police)
Bookmark and Share Feedback Print
 
ಸಿಟಿ ಬ್ಯಾಂಕ್‌ನ 300 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಶಿವರಾಜ್ ಪುರಿಗೆ, ನ್ಯಾಯಾಲಯ ಪೊಲೀಸ್ ಬಂಧನದ ಅವಧಿಯನ್ನು ಮತ್ತೆ ಆರು ದಿನಗಳಿಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಸಿಟಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುರಿ, ತನ್ನದೇ ಬ್ಯಾಂಕ್‌ಗೆ 300 ಕೋಟಿ ರೂಪಾಯಿ ವಂಚಿಸಿ, ಹಲವು ಅವ್ಯವಹಾರಗಳನ್ನು ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಅಧಿಕಾರಿಗಳು ಆರೋಪಿಯ ವಿಚಾರಣೆಗಾಗಿ ಬಂಧನದ ಅವಧಿಯನ್ನು ಮತ್ತಷ್ಟು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಕೋರಿದ ಹಿನ್ನೆಲೆಯಲ್ಲಿ,ನ್ಯಾಯಾಲಯ ಆರೋಪಿಯ ಬಂಧನದ ಅವಧಿಯನ್ನು ವಿಸ್ತರಿಸಿದೆ.

ಸಿಟಿ ಬ್ಯಾಂಕ್‌ನ 300 ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಅಧಿಕಾರಿಗಳು, ಕಂಪೆನಿಯ ಪರವಾಗಿ ಅನಧಿಕೃತ ಹೂಡಿಕೆಯಲ್ಲಿ ತೊಡಗಿದ್ದ ಹೀರೋ ಕಾರ್ಪೋರೇಟ್ ಸರ್ವಿಸಸ್‌ನ ಮುಖ್ಯ ಆರ್ಥಿಕ ಅದಿಕಾರಿ ಸಂಜಯ್ ಗುಪ್ತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಟಿ ಬ್ಯಾಂಕ್‌ನ ಗುರ್ಗಾಂವ್ ಶಾಖೆಯ ಗ್ರಾಹಕ ವ್ಯವಹಾರಗಳ ವ್ಯವಸ್ಥಾಪಕ ಹಾಗೂ ಹಗರಣದಜ ರೂವಾರಿಯಾದ ಶಿವರಾಜ್‌ ಪುರಿ, ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಗುಪ್ತಾ ಹೆಸರನ್ನು ಬಹಿರಂಗಪಡಿಸಿದ್ದರಿಂದ, ಗುಪ್ತಾ ಅವರನ್ನು ಬಹಿರಂಗಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಶಿವರಾಜ್ ಪುರಿ ಆರ್ಥಿಕ ವಂಚನೆಯಲ್ಲಿ ತೊಡಗಿರುವ ಬಗ್ಗೆ ಸಂಜಯ್ ಗುಪ್ತಾ ಅವರಿಗೆ ಮಾಹಿತಿಯಿತ್ತು. ಆದರೆ ಪುರಿ ಕಮಿಶನ್ ನೀಡುವುದಾಗಿ ಹೇಳಿಕೆ ನೀಡಿದ ನಂತರ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿವೆ.

ಹೀರೋ ಗ್ರೂಪ್‌ನ ಸಹೋದರ ಸಂಸ್ಥೆಯಾದ ಹೀರೋ ಕಾರ್ಪೋರೇಟ್‌ನ ಮುಖ್ಯ ಆರ್ಥಿಕ ಅಧಿಕಾರಿ ಸಂಜಯ್ ಗುಪ್ತಾ, ಅನಧಿಕೃತವಾಗಿ 28.75 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ