ಈರುಳ್ಳಿ ರಫ್ತು ನಿಷೇಧ ಹಿಂಪಡೆದ ಪಾಕಿಸ್ತಾನ:ಎಸ್.ಎಂ.ಕೃಷ್ಣ
ನವದೆಹಲಿ, ಶುಕ್ರವಾರ, 7 ಜನವರಿ 2011( 15:54 IST )
PTI
ಕೇಂದ್ರ ಸರಕಾರದಿಂದ ಭಾರಿ ಒತ್ತಡ ಎದುರಾದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಈರುಳ್ಳಿ ಮೇಲೆ ಹೇರಿದ ನಿಷೇಧವನ್ನು ಹಿಂದಕ್ಕೆ ಪಡೆದಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ಹತ್ತಿ ರಫ್ತಿಗೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ, ಸೇಡಿನ ಕ್ರಮವಾಗಿ ಪಾಕಿಸ್ತಾನ ಕೂಡಾ ಈರುಳ್ಳಿ ರಫ್ತಿಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.
ಕೇಂದ್ರ ಸರಕಾರದ ವಿದೇಶಾಂಗ ಸಚಿವಾಲದ ಅಧಿಕಾರಿಗಳು ಇಸ್ಲಾಮಾಬಾದ್‌ನ ವಿದೇಶಾಂಗ ರಾಯಭಾರಿಗಳೊಂದಿಗೆ ನಡೆದ ಚರ್ಚೆಯ ನಂತರ ಪಾಕಿಸ್ತಾನ, ಈರುಳ್ಳಿ ರಫ್ತಿಗೆ ಹೇರಿದ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ದೇಶಗಳ ಉನ್ನತ ಮಟ್ಟದ ಅಧಿಕಾರಿಗಳು ಪರಸ್ಪರ ಮಾತುಕತೆ ಮುಂದುವರಿಸಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.
ರಸ್ತೆ ಹಾಗೂ ರೈಲು ಮೂಲಕ ಭಾರತಕ್ಕೆ ಈರುಳ್ಳಿ ರಫ್ತು ವಹಿವಾಟಿಗೆ ನಿಷೇಧ ಹೇರಿ ಪಾಕಿಸ್ತಾನ ಹೊರಡಿಸಿದ ಆದೇಶಕ್ಕೆ ಭಾರತ ಅಮಸಧಾನ ವ್ಯಕ್ತಪಡಿಸಿತ್ತು.