ವೊಕ್ಸ್‌ವಾಗೆನ್ ಕಂಪೆನಿಯ ಸ್ಕೋಡಾ ಅಟೋ ಕಂಪೆನಿ, ವಾಹನಗಳ ಮಾರಾಟದಲ್ಲಿ ವರ್ಷಾಂತ್ಯಕ್ಕೆ ಶೇ.11.5ರಷ್ಟು ಏರಿಕೆ ಕಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ 2009ರ ಅವಧಿಯಲ್ಲಿ 684,200 ಕಾರುಗಳಮ್ಮು ಮಾರಾಟ ಮಾಡಲಾಗಿತ್ತು.ಆದರೆ, ಪ್ರಸಕ್ತ ವರ್ಷದ ಅವಧಿಯಲ್ಲಿ 762,600 ಕಾರುಗಳು ಮಾರಾಟ ಮಾಡಲಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಣೆಯಲ್ಲಿ ಬಹಿರಂಗಪಡಿಸಿದೆ.
ವಿಶ್ವದ ವಾಹನೋದ್ಯಮ ಕ್ಷೇತ್ರದ ವಹಿವಾಟಿನಲ್ಲಿ ಕಂಪೆನಿಯ ವಹಿವಾಟು ಭಾರಿ ಚೇತರಿಕೆ ಕಂಡಿದೆ ಎಂದು ಸ್ಕೋಡಾ ಮುಖ್ಯಸ್ಥ ವಿನ್‌ಫ್ರೈಡ್ ವಾಲಾಂಡ್ ತಿಳಿಸಿದ್ದಾರೆ.
ಮುಂಬರುವ 2018ರ ವೇಳೆಗೆ ವಿಶ್ವದಾದ್ಯಂತ ವಾಹನಗಳ ಮಾರಾಟವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.