ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹೂಡಿಕೆಗೆ ಕರ್ನಾಟಕ, ಗುಜರಾತ್‌ ಪ್ರಶಸ್ತ ರಾಜ್ಯಗಳು:ಯುಎಸ್ (Karnataka | Gujarat | Role model | States | Investment | US)
Bookmark and Share Feedback Print
 
PTI
ರಾಜ್ಯ ಸರಕಾರಗಳ ಪಾರದರ್ಶಕ ಅಡಳಿತ ಹಾಗೂ ಅಭಿವೃದ್ಧಿ ಪರ ನಾಯಕತ್ವದಿಂದಾಗಿ, ಮುಂಬರುವ ದಿನಗಳಲ್ಲಿ ದೇಶದಲ್ಲಿಯೇ ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳು ಹೂಡಿಕೆಗೆ ಮಾದರಿ ರಾಜ್ಯಗಳಾಗಲಿವೆ ಎಂದು ಯುಎಸ್ ಬಿಜಿನೆಸ್ ಫೋರಂ ಪ್ರತಿನಿಧಿಗಳು ಹೇಳಿದ್ದಾರೆ.

ಸ್ಪರ್ಧಾತ್ಮಕತೆ, ಪಾರದರ್ಶಕತೆ ಮತ್ತು ಅಭಿವೃದ್ಧಿ ಪರ ನಾಯಕತ್ವ ನಿಲುವುಗಳಿಂದಾಗಿ ಹೂಡಿಕೆದಾರರನ್ನು ಆಕರ್ಷಿಸುವ ಪ್ರಮುಖ ಅಂಶಗಳಾಗಿವೆ. ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಅಭಿವೃದ್ಧಿ ಪರ ನಾಯಕತ್ವ ಹೊಂದಿದೆ ಎಂದು ಯುಎಸ್ ಇಂಡಿಯಾ ಬಿಜಿನೆಸ್ ಕೌನ್ಸಿಲ್‌ನ ಅಧ್ಯಕ್ಷ ರೊನ್ ಸೋಮರ್ಸ್ ತಿಳಿಸಿದ್ದಾರೆ.

PTI
ಆದ್ದರಿಂದ, ಎಸ್ಸಾರ್, ಟೊರೆಂಟ್, ರಿಲಯನ್ಸ್, ಶೆಲ್,ಟಾಟಾ, ಆದಾನಿ ಮತ್ತು ಹಲವಾರು ಜಾಗತಿಕ ಮಟ್ಟದ ಕಂಪೆನಿಗಳು ಗುಜರಾತ್‌ನಲ್ಲಿ ಘಟಕಗಳನ್ನು ಆರಭಿಸುವ ನಿಟ್ಟಿನಲ್ಲಿ ಆಸಕ್ತಿ ತೋರಿವೆ ಎಂದು ವಿವರಣೆ ನೀಡಿದ್ದಾರೆ.

ಪ್ರಭಾವಿ ಮೇಲ್ವಿಚಾರಣೆ ಮತ್ತು ದಕ್ಷ ಅಡಳಿತ, ಉದ್ಯಮ-ಸ್ನೇಹಿ ನೀತಿಗಳು, ಅತ್ಯುತ್ತಮ ಮೂಲಸೌಕರ್ಯಗಳಿಂದಾಗಿ ಗುಜರಾತ್ ರಾಜ್ಯ ದೇಶದ ಉದ್ಯಮ ಕೇಂದ್ರವಾಗಿ ಪರಿವರ್ತನೆಯಾಗಿದೆ ಎಂದು ತಿಳಿಸಿದ್ದಾರೆ.

ಸೊಮರ್ಸ್ ಒಂದು ವಾರಗಳ ಕಾಲ ಭಾರತದ ಪ್ರವಾಸವನ್ನು ಹಮ್ಮಿಕೊಂಡಿದ್ದು, ಉದ್ಯಮ ಸ್ನೇಹಿ ಹಾಗೂ ಹೂಡಿಕೆಗೆ 'ರೋಲ್ ಮಾಡೆಲ್‌' ರಾಜ್ಯಗಳಾದ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಂಚರಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ