ದೇಶದ ಖಾಸಗಿ ಟೆಲಿಕಾಂ ಕಂಪೆನಿಯಾದ ಏರ್‌ಸೆಲ್, ಮುಂದಿನ 40-60 ದಿನಗಳೊಳಗಾಗಿ 3ಜಿ ಸೇವೆಯನ್ನು ಆರಂಭಿಸಲಿದೆ ಎಂದು ಕಂಪೆನಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಟೆಲಿಕಾಂ ಬಿಡ್‌ನಲ್ಲಿ ಪಡೆಯಲಾದ ಎಲ್ಲಾ 13 ವಲಯಗಳಲ್ಲಿ 3ಜಿ ಸೇವೆಯನ್ನು ಆರಂಭಿಸಲು ಯೋಜನೆಯನ್ನು ರೂಪಿಸಲಾಗುತ್ತದೆ ಎಂದು ಏರ್‌ಸೆಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ ಮಲ್ಲಿಕಾರ್ಜುನ್ ರಾವ್ ತಿಳಿಸಿದ್ದಾರೆ.
ಏರ್‌ಸೆಲ್ ಕಂಪೆನಿ, 3ಜಿ ಸೇವೆಗಳನ್ನು ಒದಗಿಸಲು ಅನುಮತಿಯನ್ನು ಪಡೆದ ಟೆಲಿಕಾಂ ಕಂಪೆನಿಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ರಾವ್ ವಿವರಣೆ ನೀಡಿದ್ದಾರೆ.
ಏರ್‌ಸೆಲ್ ಕಂಪೆನಿ ಇತರ ಟೆಲಿಕಾಂ ಕಂಪೆನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಇಂಟ್ರಾ ಸರ್ಕಲ್ ರೋಮಿಂಗ್ ವ್ಯವಸ್ಥೆಯನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಏರ್‌ಸೆಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ ಮಲ್ಲಿಕಾರ್ಜುನ್ ರಾವ್ ತಿಳಿಸಿದ್ದಾರೆ.