ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಜ್ರಾಭರಣಗಳ ರಫ್ತು ವಹಿವಾಟಿನಲ್ಲಿ ಶೇ.38ರಷ್ಟು ಏರಿಕೆ (Gems | Jewellery | Exports | GJEPC)
Bookmark and Share Feedback Print
 
ಪ್ರಸಕ್ತ ವರ್ಷದ ಆರಂಭಿಕ ಮೂರು ತ್ರೈಮಾಸಿಕ ಅವಧಿಯಲ್ಲಿ ಹರಳು ಮತ್ತು ಆಭರಣಗಳ ರಫ್ತು ವಹಿವಾಟಿನಲ್ಲಿ ಶೇ.38.5ರಷ್ಟು ಏರಿಕೆಯಾಗಿ 23.5 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

2008-09ರ ಏಪ್ರಿಲ್-ಡಿಸೆಂಬರ್ ಅವಧಿಯ ರಫ್ತು ವಹಿವಾಟು, 14.46 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು ಎಂದು ಜೆಮ್ಸ್ ಮತ್ತು ಜೆವಲ್ಲರಿ ಎಕ್ಸ್‌ಪೋರ್ಟ್ ಪ್ರಮೋಶನ್ ಕೌನ್ಸಿಲ್ ಹೊರಡಿಸಲಾದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ರಫ್ತು ವಹಿವಾಟಿನಲ್ಲಿ ಚಿನ್ನದ ವಹಿವಾಟಿಗಿಂತ ವಜ್ರದ ವಹಿವಾಟಿನಲ್ಲಿ ಏರಿಕೆಯಾಗಿದೆ. ಜಾಗತಿಕ ಆರ್ಥಿಕ ಕುಸಿತದಿಂದ ಕಂಗಾಲಾಗಿ ಇದೀಗ ಚೇತರಿಸಿಕೊಂಡಿದ್ದು, ವಹಿವಾಟಿನಲ್ಲಿ ಶೇ.20ರಷ್ಟು ಏರಿಕೆ ಕಂಡಿದೆ ಎಂದು ಜಿಜೆಇಪಿಸಿ ಮುಖ್ಯಸ್ಥ ರಾಜೀವ್ ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತದಿಂದ ಅಮೆರಿಕೆಗೆ ಶೇ.50ರಷ್ಟು ವಜ್ರಾಭರಣಗಳನ್ನು ರಫ್ತು ಮಾಡಲಾಗುತ್ತದೆ. ಯುರೋಪ್, ಹಾಂಗ್‌ಕಾಂಗ್ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಕೂಡಾ ರಫ್ತು ವಹಿವಾಟಿನಲ್ಲಿ ಚೇತರಿಕೆ ಕಂಡಿದೆ.

ಯುರೋಪ್ ಮಾರುಕಟ್ಟೆ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಏಪ್ರಿಲ್‌-ಡಿಸೆಂಬರ್ ಅವಧಿಯಲ್ಲಿ ರಫ್ತು ವಹಿವಾಟಿನಲ್ಲಿ ಶೇ.30ರಷ್ಟು ಚೇತರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ