ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಟಿ ದಾಳಿ: ನಾಸಿಕ್‌ನಲ್ಲಿ ಈರುಳ್ಳಿ ವರ್ತಕರ ಮುಷ್ಕರ (Onion Tradres | Nashik | APMC | Protest | IT Raid)
Bookmark and Share Feedback Print
 
PTI
ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನ ಸಾಮಾನ್ಯರಿಗೆ ಒಂದಿಷ್ಟಾದರೂ ಸಾಂತ್ವನ ದೊರಕಿಸುವ ನಿಟ್ಟಿನಲ್ಲಿ, ಆದಾಯ ತೆರಿಗೆ ಇಲಾಖೆಯು ದೇಶಾದ್ಯಂತ ದಾಳಿ ನಡೆಸಿದ್ದರ ಹಿನ್ನೆಲೆಯಲ್ಲಿ, ಈರುಳ್ಳಿ ಮಂಡಿ ವ್ಯಾಪಾರಸ್ಥರು ಸೋಮವಾರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಂದ ಎರಡು ದಿನ ಈರುಳ್ಳಿ ಖರೀದಿಸದಿರಲು ನಿರ್ಧರಿಸಿದೆ.

ಈರುಳ್ಳಿಯನ್ನು ಕಿಲೋ ಒಂದಕ್ಕೆ 40 ರೂಪಾಯಿಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು ಎಂದು ಮಹಾರಾಷ್ಟ್ರ ಸರಕಾರ ನಿರ್ದೇಶನ ನೀಡಿತ್ತು. ಇದನ್ನು ಈರುಳ್ಳಿ ವ್ಯಾಪಾರಿಗಳು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಾಸಿಕ್ ಜಿಲ್ಲಾ ಈರುಳ್ಳಿ ವ್ಯಾಪಾರಿಗಳ ಒಕ್ಕೂಟದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಇದೇ ವೇಳೆ, ಈರುಳ್ಳಿ ಬೆಳೆಗಾರರು ಮಂಡಿ ವ್ಯಾಪಾರಿಗಳ ನಿರ್ಧಾರದಿಂದ ಆಕ್ರೋಶಗೊಂಡಿದ್ದಾರೆ. ಈ ಬಿಕ್ಕಟ್ಟು ಪರಿಹರಿಸಲು ಮಹಾರಾಷ್ಟ್ರ ಸರಕಾರವು ತುರ್ತು ಸಭೆಯೊಂದನ್ನು ಕರೆದಿದೆ.

ಕಳೆದ ವಾರ, ದೇಶಾದ್ಯಂತ ಈರುಳ್ಳಿ ಸಗಟು ವ್ಯಾಪಾರಸ್ಥರ ಮಳಿಗೆಗಳಿಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನಿರಿಸಲಾದ ಈರುಳ್ಳಿಯನ್ನು ಪತ್ತೆ ಹಚ್ಚಿತ್ತು. ಸಗಟು ವ್ಯಾಪಾರಿಗಳು ಮತ್ತು ಸಂಘಟಿತ ಮಂಡಿಗಳೇ ದೇಶದ ಈರುಳ್ಳಿ ಬೆಲೆಯನ್ನು ನಿಯಂತ್ರಿಸುತ್ತಿವೆ ಎಂಬ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ