ವಿಶ್ವದ ಪ್ರತಿಷ್ಠಿತ ತಂತ್ರಜ್ಞಾನ ಕಂಪನಿ ಆಪಲ್ ಮುಖ್ಯಸ್ಥ ಸ್ಟೀವ್ ಜಾಬ್ಸ್, ಕಳೆದ ಮೂರು ವರ್ಷಗಳಿಂದ ವೇತನ ರೂಪದಲ್ಲಿ ಕೇವಲ ಒಂದು ಡಾಲರ್ ಪಡೆಯುತ್ತಿದ್ದಾರೆ.
1997ರಲ್ಲಿ ಕಂಪನಿಗೆ ಪುನಃ ಸೇರ್ಪಡೆಗೊಂಡ ಜಾಬ್ಸ್, ತನ್ನ ಬುದ್ಧಿಕೌಶಲ್ಯದಿಂದ ಆಧುನಿಕ ತಂತ್ರಜ್ಞಾನದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿ ಭರ್ಜರಿ ಮಾರಾಟವಾದ, ಆಪಲ್ ಕಂಪನಿಯಿಂದ ಐಫೋನ್, ಐಪ್ಯಾಡ್, ಮತ್ತು ಐಪಾಡ್ ಮುಂತಾದ ವಸ್ತುಗಳನ್ನು ಪರಿಚಯಿಸಿದ್ದರು.
ವಿಚಿತ್ರವೆಂದರೆ, 2008-09ನೇ ಸಾಲಿನ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ, ಆರ್ಥಿಕ ಹಿಂಜರಿತಕ್ಕೆ ಕಾರಣರು ಎಂಬ ಆಪಾದನೆಗೆ ಗುರಿಯಾಗಿದ್ದ ವಿಶ್ವದ ಅಧಿಕ ವೇತನ ಪಡೆಯುತ್ತಿದ್ದ ಪ್ರಸಿದ್ಧ ಕಂಪನಿ ಮುಖ್ಯಸ್ಥರ ಪಟ್ಟಿಯಲ್ಲಿ ಜಾಬ್ಸ್ ಹೆಸರೂ ಇತ್ತು.
ಆರ್ಥಿಕ ಹಿಂಜರಿತದಿಂದ ಕಂಪನಿಗೆ ಉಂಟಾದ ನಷ್ಟವನ್ನು ಭರ್ತಿಮಾಡಲು ಜಾಬ್ಸ್, 2003ರಲ್ಲಿ ಕಂಪನಿಯ ಪುರಸ್ಕಾರವನ್ನು ಸ್ವೀಕರಿಸಲಿಲ್ಲ. ಮತ್ತು ವಾರ್ಷಿಕ ವೇತನವನ್ನು ಕೇವಲ ಒಂದು ಡಾಲರ್ ಆಗಿ ಪಡೆಯುತ್ತಿದ್ದಾರೆ ಎಂದು ಆಪಲ್ ಕಂಪನಿ ತಿಳಿಸಿದೆ.