2010ರ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ಕಾರು ಮಾರಾಟದಲ್ಲಿ ಶೇ.29ರಷ್ಟು ಹೆಚ್ಚಳ ಕಂಡಿರುವುದಾಗಿ ದೇಶದ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಗಳು ತಿಳಿಸಿವೆ.
ಡಿಸೆಂಬರ್ ತಿಂಗಳಿನಲ್ಲಿ ಕಾರು ಮಾರಾಟ ಹೆಚ್ಚಳ ಕಂಡಿದ್ದು, ಅದರಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಶೇ.42, ಮಾರುತಿ ಸುಜುಕಿ ಶೇ.26 ಹಾಗೂ ಟಾಟಾ ಮೋಟಾರ್ಸ್ ಶೇ.31ರಷ್ಟು ಏರಿಕೆ ಕಂಡಿವೆ.
ದೇಶದ ಕಾರು ಮಾರುಕಟ್ಟೆಯಲ್ಲಿ ಅತ್ಯಧಿಕ ಮಾರಾಟವಾಗುವ ಮೂಲಕ ಕಾರು ಮಾರಾಟದಲ್ಲಿ ಜಗತ್ತಿನಲ್ಲಿಯೇ ಎರಡನೇ ಬೃಹತ್ ಕಾರು ಮಾರಾಟ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಆದರೆ ತೈಲ ಬೆಲೆ ಹೆಚ್ಚಳ, ಬ್ಯಾಂಕ್ ಸಾಲದ ಬಡ್ಡಿದರದ ಹೆಚ್ಚಳದ ಪರಿಣಾಮವಾಗಿ 2011ರಲ್ಲಿ ಮಾರಾಟದಲ್ಲಿ ಸ್ವಲ್ಪ ಕುಸಿತ ಕಾಣುವ ಸಾಧ್ಯತೆ ಇರುವುದಾಗಿಯೂ ಕಂಪನಿಗಳು ಆತಂಕ ವ್ಯಕ್ತಪಡಿಸಿವೆ.