ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸ್ವದೇಶಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ (Domestic car | SIAM | motorcycle | Business)
Bookmark and Share Feedback Print
 
PTI
PTI
ಭಾರತೀಯ ಆಟೋಮೊಬೈಲ್ ಉತ್ಪಾದಕ ಮಂಡಳಿ (ಎಸ್ಐಎಎಂ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಡಿಸೆಂಬರ್ ತಿಂಗಳಲ್ಲಿ ಸ್ವದೇಶಿ ಕಾರುಗಳ ಮಾರಾಟ 2009ಕ್ಕಿಂತ 2010ರಲ್ಲಿ ಶೇ.28.91ರಷ್ಟು ಏರಿಕೆಯಾಗಿದೆ.

ದೇಶದೆಲ್ಲೆಡೆಯಿರುವ ಆಟೋಮೊಬೈಲ್ ಘಟಕಗಳಲ್ಲಿ 2009ರ ಡಿಸೆಂಬರ್‌ನಲ್ಲಿ 1,15,337 ಕಾರುಗಳು ಮಾರಾಟವಾಗಿದ್ದವು ಹಾಗೂ 2010ರ ಡಿಸೆಂಬರಿನಲ್ಲಿ ಇದರ ಪ್ರಮಾಣ 1,48,681ಕ್ಕೆ ಏರಿಕೆಯಾಗಿದೆ.

ಅದೇ ರೀತಿ, 2009ರ ಡಿಸೆಂಬರ್ ತಿಂಗಳಲ್ಲಿ 5,92,589 ರಷ್ಟಿದ್ದ ಮೋಟಾರ್ ಸೈಕಲ್ ಮಾರಾಟ ಪ್ರಮಾಣವು, 2010ರ ಡಿಸೆಂಬರ್ ಅವಧಿಯಲ್ಲಿ 7,53,358 ಕ್ಕೆ ಏರಿಕೆ ಕಂಡಿದೆ. ಅಂದರೆ ಸುಮಾರು ಶೇ. 27.13 ರಷ್ಟು ವೃದ್ಧಿಯಾಗಿದೆ.

2009ರ ಡಿಸೆಂಬರ್ ವೇಳೆಗೆ 7,67,789 ರಷ್ಟು ಒಟ್ಟು ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. 2010ರ ಅದೇ ವೇಳೆಗೆ 10,06,545ಕ್ಕೆ ಏರಿಕೆ ಕಂಡಿದೆ. ಅಂದರೆ ದೇಶದಾದ್ಯಂತ ಒಟ್ಟು ದ್ವಿಚಕ್ರ ವಾಹನಗಳ ಮಾರಾಟ ಶೇ. 31.1ಕ್ಕೆ ಏರಿಕೆಯಾದಂತಾಗಿದೆ.

ವಾಣಿಜ್ಯೋದ್ಯಮಕ್ಕೆ ಬಳಸುವ ವಾಹನಗಳ ಮಾರಾಟ ಶೇ. 27.3ರಷ್ಟು ಏರಿಕೆ ಕಂಡಿದೆ. 2009ರ ಈ ಅವಧಿಯಲ್ಲಿ 48,611 ವಾಹನಗಳು ಮಾರಾಟವಾಗಿದ್ದರೆ, 2010ರಲ್ಲಿ ಇದೇ ಅವಧಿಯಲ್ಲಿ 61,880 ವಾಹನಗಳು ಮಾರಾಟವಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ