ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನವೆಂಬರ್ ತಿಂಗಳಲ್ಲಿ ಶೇ.2.7 ಕುಸಿದ ಕೈಗಾರಿಕಾ ಪ್ರಗತಿ (Industrial Growth | India Growth Index | Reserve Bank | Industrial Production)
Bookmark and Share Feedback Print
 
ಬೆಲೆ ಏರಿಕೆಯಿಂದಾಗಿ ದೇಶದ ಪ್ರಗತಿಯೂ ಸರಕಾರದ ನಿಯಂತ್ರಣ ಮೀರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ಸುದ್ದಿ. 2009ರ ನವೆಂಬರ್ ತಿಂಗಳಲ್ಲಿದ್ದ ಶೇ.11.3ರಷ್ಟಿದ್ದ ಕೈಗಾರಿಕಾ ಪ್ರಗತಿಯು 2010ರ ನವೆಂಬರ್ ವೇಳೆಗೆ ಶೇ.2.7ಕ್ಕೆ ಕುಸಿದಿದ್ದು, ಉತ್ಪಾದನಾ ಕ್ಷೇತ್ರಕ್ಕಾದ ತೀವ್ರ ಹಿನ್ನಡೆಯೇ ಇದಕ್ಕೆ ಪ್ರಮುಖ ಕಾರಣ.

2010ರ ಅಕ್ಟೋಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ)ವನ್ನು ಶೇ. 11.29ಕ್ಕೆ ವಿಸ್ತರಿಸಲಾಗಿತ್ತು. ಈ ಹಣಕಾಸು ವರ್ಷದ ಏಪ್ರಿಲ್-ನವೆಂಬರ್ ಅವಧಿಯ ಕೈಗಾರಿಕಾ ಬೆಳವಣಿಗೆಯು ಶೇ.9.5ರಲ್ಲಿತ್ತು. ಹಿಂದಿನ ವರ್ಷ ಇದೇ ಅವಧಿಯಲ್ಲಿ ಅದು ಶೇ.7.4 ಮಾತ್ರ ಆಗಿತ್ತು.

ನವೆಂಬರ್ ತಿಂಗಳಲ್ಲಿ ಉತ್ಪಾದನಾ ಕ್ಷೇತ್ರದ ಪ್ರಗತಿಯು ವರ್ಷದ ಹಿಂದೆ ಇದ್ದುದಕ್ಕಿಂತ (ಶೇ.12.3) ತೀವ್ರವಾಗಿ ಕುಸಿದು ಶೇ. 2.3ಕ್ಕೆ ತಲುಪಿದೆ. ಇದೇ ರೀತಿಯಾಗಿ ಬಾಳಿಕೆಯಿಲ್ಲದ ಗ್ರಾಹಕೀಯ ವಸ್ತುಗಳ ಉತ್ಪಾದನಾ ಪ್ರಗತಿಯು ಶೇ.2.3 ಇದ್ದದ್ದು ಋಣಾತ್ಮಕ ದಿಕ್ಕಿನಲ್ಲಿ ಸಾಗಿ ಮೈನಸ್ ಶೇ. 6ಕ್ಕೆ ಇಳಿದಿದೆ.

ಆದರೆ ಬಂಡವಾಳ ಸರಕು ವಿಭಾಗವು ಪ್ರಗತಿ ದಾಖಲಿಸಿದ್ದು, ಹಿಂದಿನ ವರ್ಷದಲ್ಲಿ ಶೇ.11 ಇದ್ದದ್ದು ಈ ನವೆಂಬರ್ ತಿಂಗಳಲ್ಲಿ ಶೇ.12.6ಕ್ಕೆ ಏರಿಕೆಯಾಗಿದೆ.

ಜನವರಿ 25ರಂದು ಭಾರತೀಯ ರಿಸರ್ವ್ ಬ್ಯಾಂಕು ಮುಂಬರುವ ತ್ರೈಮಾಸಿಕ ಅವಧಿಗೆ ತನ್ನ ಹಣಕಾಸು ನೀತಿಯನ್ನು ಮರುಪರಿಶೀಲನೆ ನಡೆಸಲಿದೆ. ಕೈಗಾರಿಕಾ ಪ್ರಗತಿ ಕುಂಠಿತವಾಗಿರುವ ಕಾರಣದಿಂದ ಆ ಸಂದರ್ಭ ಪ್ರಮುಖ ಬಡ್ಡಿದರಗಳಲ್ಲಿ ಏರಿಕೆ ಮಾಡಬೇಕೇ ಬೇಡವೇ ಎಂಬ ಇಕ್ಕಟ್ಟಿನಲ್ಲಿ ಸಿಲುಕಲಿದೆ ರಿಸರ್ವ್ ಬ್ಯಾಂಕು.
ಸಂಬಂಧಿತ ಮಾಹಿತಿ ಹುಡುಕಿ