ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ತರಕಾರಿ ಬೆಲೆ ಗಗನಕ್ಕೆ; ಆಹಾರ ಹಣದುಬ್ಬರ ಕೊಂಚ ಕುಸಿತ (vegetable prices still high | Food inflation | vegetables | onions | falls to 16.91%)
Bookmark and Share Feedback Print
 
PTI
ಈರುಳ್ಳಿ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಕಳೆದ ಐದು ವಾರಗಳ ಕಾಲ ಏರುಗತಿ ಕಂಡಿದ್ದ ಆಹಾರ ಹಣದುಬ್ಬರ 2011ರ ಜನವರಿ 1ರ ವಾರಂತ್ಯಕ್ಕೆ ಶೇ.16.91ರಷ್ಟು ಅಲ್ಪ ಕುಸಿತ ಕಂಡಿದೆ.

ಆದರೂ ಈರುಳ್ಳಿ ಹಾಗೂ ಪ್ರೋಟಿನಾಂಶ್ ಹೊಂದಿರುವ ವಸ್ತುಗಳು, ತರಕಾರಿ ಬೆಲೆ ಹೆಚ್ಚಳದಲ್ಲಿ ಯಾವುದೇ ಕುಸಿತ ಕಂಡಿಲ್ಲ. ಅಲ್ಲದೇ ಡಿಸೆಂಬರ್ 25ಕ್ಕೆ ವಾರಾಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.18.32ಕ್ಕೆ ಏರಿಕೆ ಕಂಡಿತ್ತು.

ಆ ನಿಟ್ಟಿನಲ್ಲಿ ಪ್ರಸಕ್ತ ಆಹಾರ ಹಣದುಬ್ಬರದಲ್ಲಿ ಕೇವಲ 1.41ರಷ್ಟು ಇಳಿಕೆ ಕಂಡಂತಾಗಿದೆ. ಕಳೆದ ಬಾರಿ 18.32ಕ್ಕೆ ಏರಿದ್ದರೆ, ಈ ಬಾರಿ 16.91ಕ್ಕೆ ಇಳಿದಿದೆ.

ಈರುಳ್ಳಿ ದರದಲ್ಲೂ ಇಳಿಕೆ ಕಾಣದೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಈರುಳ್ಳಿ ದರದಲ್ಲಿ ಶೇ.70.70ರಷ್ಟು ಏರಿಕೆಯಾಗಿದೆ. ಇನ್ನುಳಿದಂತೆ ಆಹಾರ ಹಣದುಬ್ಬರ ಆಧಾರದ ಅನ್ವಯ ಮೊಟ್ಟೆ, ಮೀನು ಶೇ.16.70, ಹಾಲು ಶೇ.13.20ರಷ್ಟು ಹೆಚ್ಚಳವಾಗಿದೆ.

ಆಹಾರ ಹಣದುಬ್ಬರ ದರ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕ ನೀತಿಗಳಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಅನಿವಾರ್ಯತೆ ಇದೆ ಎಂದು ವಿತ್ತಸಚಿವಾಲಯದ ಅಧಿಕಾರಿಗಳು ಕಳೆದ ಆಹಾರ ಹಣದುಬ್ಬರ ಏರಿಕೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ