ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಟಿ ದಿಗ್ಗಜ ಇನ್ಫೋಸಿಸ್ ಆದಾಯದಲ್ಲಿ ಶೇ.14ರಷ್ಟು ಹೆಚ್ಚಳ (Infosys | net profit up over 14% | third quarter | software exporter)
ದೇಶದ ಎರಡನೇ ಅತೀ ದೊಡ್ಡ ಸಾಫ್ಟ್ ವೇರ್ ಕಂಪೆನಿ ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ನ ಡಿಸೆಂಬರ್ 31ಕ್ಕೆ ಕೊನೆಗೊಂಡ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ.14.12ರಷ್ಟು ಪ್ರಗತಿ ಸಾಧಿಸಿದ್ದು, ಒಟ್ಟು 1,780 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಈ ಹಿಂದಿನ 2009-2010 ಡಿಸೆಂಬರ್ ತಿಂಗಳ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿ 1,559 ಕೋಟಿ ರೂಪಾಯಿ ಆದಾಯ ಗಳಿಸಿರುವುದಾಗಿ ಇನ್ಫೋಸಿಸ್ ಹೇಳಿದೆ. ಇದರ ಮಾಹಿತಿಯನ್ನು ಮುಂಬೈ ಷೇರು ಮಾರುಕಟ್ಟೆಗೆ ನೀಡಲಾಗಿದೆ ಎಂದು ವಿವರಿಸಿದೆ.
ದೇಶದ ಎರಡನೇ ಬೃಹತ್ ಸಾಫ್ಟ್‌ವೇರ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇನ್ಫೋಸಿಸ್ ಒಟ್ಟು 7,106 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ 5,741 ಕೋಟಿ ರೂಪಾಯಿ ಆಗಿತ್ತು.
ಆರ್ಥಿಕ ಹೊಡೆತ ಮತ್ತು ನಿರುದ್ಯೋಗದ ಸಮಸ್ಯೆ ತೀವ್ರತೆಯ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸುವುದು ಕಠಿಣ ಕೆಲಸವಾಗಿದೆ. ಆದರೂ ಇನ್ಫೋಸಿಸ್ ತಮ್ಮ ಕ್ಲಯಂಟ್ ಜತೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಆ ನಿಟ್ಟಿನಲ್ಲಿ ಕಂಪನಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವ ವಿಶ್ವಾಸ ಇರುವುದಾಗಿ ಇನ್ಫೋಸಿಸ್ ಸಿಇಓ ಹಾಗೂ ಆಡಳಿತ ನಿರ್ದೇಶಕ ಎಸ್.ಗೋಪಾಲಕೃಷ್ಣನ್ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ 2011ರ ಮಾರ್ಚ್ 31ರ ನಾಲ್ಕನೇ ತ್ರೈಮಾಸಿಕ ವರದಿ ಸಂದರ್ಭದಲ್ಲಿ ಕಂಪನಿ ಆದಾಯ 7157 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಹೊಂದಿದೆ ಎಂದು ಹೇಳಿದರು.